‘ಟೈಮ್ ಮ್ಯಾಗಝಿನ್’ 1,376 ಕೋಟಿ ರೂ.ಗೆ ಮಾರಾಟ

Update: 2018-09-17 16:35 GMT

ವಾಶಿಂಗ್ಟನ್, ಸೆ. 17: ಮೆರೆಡಿತ್ ಕಾರ್ಪ್ ಕಂಪೆನಿಯು ‘ಟೈಮ್ ಮ್ಯಾಗಝಿನ್’ನ್ನು ಸೇಲ್ಸ್‌ಫೋರ್ಸ್‌ನ ಸಹಸ್ಥಾಪಕ ಮಾರ್ಕ್ ಬೆನಿಯೋಫ್ ಮತ್ತು ಅವರ ಪತ್ನಿಗೆ ಮಾರಾಟ ಮಾಡಲಿದೆ.

ಪ್ರತಿಷ್ಠಿತ ಪತ್ರಿಕೆಯನ್ನು ‘ಕ್ಲೌಡ್ ಕಂಪ್ಯೂಟಿಂಗ್’ ಕ್ಷೇತ್ರದ ದಿಗ್ಗಜ ‘ಸೇಲ್ಸ್‌ಫೋರ್ಸ್’ನ ನಾಲ್ವರು ಸಹಸ್ಥಾಪಕರಲ್ಲಿ ಒಬ್ಬರಾದ ಬೆನಿಯೋಫ್‌ರಿಗೆ 190 ಮಿಲಿಯ ಡಾಲರ್ (ಸುಮಾರು 1,376 ಕೋಟಿ ರೂಪಾಯಿ)ಗೆ ಮಾರಾಟ ಮಾಡಲಾಗುತ್ತಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಮೆರೆಡಿತ್ ಕಾರ್ಪ್ ಕಂಪೆನಿಯು ‘ಟೈಮ್ ಇಂಕ್’ ಕಂಪೆನಿಯ ಖರೀದಿಯನ್ನು ಪೂರ್ಣಗೊಳಿಸಿದ ಬಳಿಕ, ಅಂದರೆ ಸುಮಾರು 8 ತಿಂಗಳಲ್ಲಿ ಮಾರಾಟ ನಡೆಯುವುದು.

 ‘ಪೀಪಲ್’ ಮತ್ತು ‘ಬೆಟರ್ ಹೋಮ್ಸ್ ಆ್ಯಂಡ್ ಗಾರ್ಡನ್ಸ್’ ಮುಂತಾದ ಮ್ಯಾಗಝಿನ್‌ಗಳ ಪ್ರಕಾಶನ ಸಂಸ್ಥೆ ಮೆರೆಡಿತ್, ‘ಟೈಮ್ ಇಂಕ್’ನ 4 ಪತ್ರಿಕೆಗಳನ್ನು ಮಾರ್ಚ್‌ನಲ್ಲಿ ಮಾರಾಟಕ್ಕೆ ಇಟ್ಟಿತ್ತು.  ಇತರ ಮೂರು ಪತ್ರಿಕೆಗಳಾದ ‘ಫಾರ್ಚುನ್’, ‘ಮನಿ’ ಮತ್ತು ‘ಸ್ಪೋರ್ಟ್ಸ್ ಇಲ್ಲಸ್ಟ್ರೇಟಡ್’ಗಳ ಮಾರಾಟಕ್ಕೆ ಸಂಬಂಧಿಸಿದ ಮಾತುಕತೆ ಮುಂದುವರಿದಿದೆ. ‘ಟೈಮ್ ಮ್ಯಾಗಝಿನ್’ 1923 ಮಾರ್ಚ್‌ನಲ್ಲಿ ಆರಂಭಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News