ಇಥಿಯೋಪಿಯ: ಅಲ್ಪಸಂಖ್ಯಾತರ ಮೇಲೆ ದಾಳಿ; 23 ಸಾವು

Update: 2018-09-17 17:17 GMT

 ಅಡಿಸ್ ಅಬಾಬ (ಇಥಿಯೋಪಿಯ), ಸೆ. 17: ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬ ಸಮೀಪದ ಪಟ್ಟಣವೊಂದರಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ.

ದೇಶಭ್ರಷ್ಟ ಒರೊಮೊ ಲಿಬರೇಶನ್ ಫ್ರಂಟ್ (ಒಎಲ್‌ಎಫ್)ನ ನಾಯಕರು ಇಥಿಯೋಪಿಯಕ್ಕೆ ಮರಳಿದ ಹಿನ್ನೆಲೆಯಲ್ಲಿ ಕಳೆದ ವಾರ ಬೃಹತ್ ಸಭೆಯೊಂದನ್ನು ನಡೆಸಲಾಗಿತ್ತು. ಆ ಬಳಿಕ, ಅಲ್ಲಿ ಅಶಾಂತಿ ತಲೆದೋರಿದೆ.

ಒರೊಮೊ ಜನಾಂಗೀಯರಿಗೆ ಸ್ವನಿರ್ಣಯದ ಹಕ್ಕು ನೀಡಬೇಕು ಎಂದು ಒತ್ತಾಯಿಸಿ ಈ ಗುಂಪು ಬಂಡಾಯ ನಡೆಸುತ್ತಿತ್ತು.

ಒರೊಮೊ ಇಥಿಯೋಪಿಯದ ಅತಿ ದೊಡ್ಡ ಜನಾಂಗೀಯ ಗುಂಪಾಗಿದೆ.

ಒರೊಮೊ ಜನಾಂಗಕ್ಕೆ ಸೇರಿದ ಯುವಕರು ರಸ್ತೆಗಳಲ್ಲಿ ಹಿಂಸಾಚಾರ ನಡೆಸಿದರು ಎಂದು ಸ್ಥಳೀಯರು ಹೇಳಿದ್ದಾರೆ. ಅವರು ಅಲ್ಪಸಂಖ್ಯಾತರಿಗೆ ಸೇರಿದ ವ್ಯಾಪಾರ ಮಳಿಗೆಗಳು ಮತ್ತು ಮನೆಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News