ಚೀನಾ ಜೊತೆಗಿನ ಜಲವಿದ್ಯುತ್ ಒಪ್ಪಂದ ರದ್ದುಪಡಿಸಿದ ನೇಪಾಳ

Update: 2018-09-20 17:08 GMT

 ಕಠ್ಮಂಡು, ಸೆ. 20: 1.5 ಬಿಲಿಯ ಡಾಲರ್ (ಸುಮಾರು 10,770 ಕೋಟಿ ರೂಪಾಯಿ) ವೆಚ್ಚದ ‘ವೆಸ್ಟ್ ಸೇಟಿ ಜಲವಿದ್ಯುತ್ ಸ್ಥಾವರ’ ನಿರ್ಮಾಣಕ್ಕಾಗಿ ಚೀನಾದ ಕಂಪೆನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಿರುವುದಾಗಿ ನೇಪಾಳ ಸರಕಾರ ಬುಧವಾರ ಘೋಷಿಸಿದೆ.

ಇದು ನೇಪಾಳದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವ ಚೀನಾದ ಮಹತ್ವಾಕಾಂಕ್ಷೆಗೆ ದೊಡ್ಡ ಹೊಡೆತವಾಗಿದೆ.

ಪಶ್ಚಿಮ ನೇಪಾಳದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ 750 ಮೆಗಾವಾಟ್ ಯೋಜನೆಯನ್ನು ನೇಪಾಳದಲ್ಲಿ ಚೀನಾದ ಬೃಹತ್ ಯೋಜನೆಯೆಂಬುದಾಗಿ ಪರಿಗಣಿಸಲಾಗಿತ್ತು.

ಈ ಸಂಬಂಧ ಉಭಯ ದೇಶಗಳು 2012ರಲ್ಲಿ ತಿಳುವಳಿಕೆ ಪತ್ರವೊಂದಕ್ಕೆ ಸಹಿ ಹಾಕಿದ್ದವು.

ಚೀನಾದ ಮಹತ್ವಾಕಾಂಕ್ಷೆಯ ‘ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್’ ಮೂಲ ಸೌಕರ್ಯ ಯೋಜನೆಯಲ್ಲಿ ನೇಪಾಳ ಭಾಗಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News