ಮೇರಿಲ್ಯಾಂಡ್ ಗುಂಡಿನ ದಾಳಿಗೆ ಮೂರು ಬಲಿ

Update: 2018-09-20 18:03 GMT

ಅನ್ನಾಪೊಲಿಸ್, ಸೆ.20: ಮೇರಿಲ್ಯಾಂಡ್‌ನ ಪೆರಿಮನ್‌ನಲ್ಲಿರುವ ರೈಟ್ ಏಡ್‌ನ ಹಂಚಿಕಾ ಕೇಂದ್ರದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಟ ಮೂವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶಂಕಿತ ಶೂಟರ್ ಸದ್ಯ ಪೊಲೀಸರ ವಶದಲ್ಲಿದ್ದು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಈ ಘಟನೆ ನಡೆದಿದೆ. ಶಂಕಿತ ದಾಳಿಕೋರನಿಗೆ ಸಂಸ್ಥೆಯಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ತನ್ನ ಬಳಿ ಇದ್ದ ಗನ್‌ನಿಂದ ಆರೋಪಿ ದಾಳಿ ನಡೆಸಿದ್ದು ಈ ವೇಳೆ ಪೊಲೀಸರು ಆತನ ಮೇಲೆ ಪ್ರತಿ ದಾಳಿ ನಡೆಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ರೈಟ್ ಏಡ್‌ನಲ್ಲಿ ಒಂದು ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದು ಸುಮಾರು 2,500 ಮಳಿಗೆಗಳಿಗೆ ಔಷಧ ಸೇರಿದಂತೆ ಇತರ ವಸ್ತುಗಳನ್ನು ಸರಬರಾಜು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News