ಹದಗೆಡುತ್ತಿರುವ ಫೆಲೆಸ್ತೀನಿಯರ ಪರಿಸ್ಥಿತಿ: ಅರಬ್ ಲೀಗ್ ಮಹಾಕಾರ್ಯದರ್ಶಿ ಆತಂಕ

Update: 2018-09-20 17:37 GMT

ದುಬೈ, ಸೆ. 20: ಆಕ್ರಮಿತ ಪ್ರದೇಶಗಳಲ್ಲಿರುವ ಫೆಲೆಸ್ತೀನಿಯರ ಪರಿಸ್ಥಿತಿ ಹದಗೆಡುತ್ತಿದೆ ಎಂದು ಅರಬ್ ಲೀಗ್ ಮಹಾಕಾರ್ಯದರ್ಶಿ ಅಹ್ಮದ್ ಅಬುಲ್ ಎಚ್ಚರಿಸಿದ್ದಾರೆ.

‘‘ಅಲ್ಲಿನ ಪರಿಸ್ಥಿತಿ ಕಳವಳಕ್ಕೆ ಕಾರಣವಾಗಿದೆ. ಈ ಸಂಘರ್ಷದ ಅತ್ಯಂತ ದುರ್ಬಲ ಪಕ್ಷದ ಮೇಲೆ ಅಮೆರಿಕ ಸರಕಾರ ಅಗಾಧ ಒತ್ತಡ ಹೇರುತ್ತಿದೆ. ಇಂಥ ಪರಿಸ್ಥಿತಿಯು ಮುಂದೆ ಹೇಗೆ ಶಾಂತಿಯನ್ನು ತರಬಲ್ಲದು ಎನ್ನುವುದು ಅರ್ಥವಾಗುತ್ತಿಲ್ಲ. ಅಮೆರಿಕದ ನೀತಿಯು ವಾಸ್ತವವಾಗಿ ಎರಡು-ದೇಶ ಪರಿಹಾರದಿಂದ ನಮ್ಮನ್ನು ವಿಮುಖರನ್ನಾಗಿ ಮಾಡುತ್ತಿದೆ’’ ಎಂದು ಹೇಳಿಕೆಯೊಂದರಲ್ಲಿ ಅಹ್ಮದ್ ಅಬುಲ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತ ಸಂಸ್ಥೆ ಯುಎನ್‌ಆರ್‌ಡಬ್ಲುಎಗೆ ನೀಡುತ್ತಿದ್ದ ಎಲ್ಲ ನೆರವನ್ನು ಅಮೆರಿಕ ಇತ್ತೀಚೆಗೆ ನಿಲ್ಲಿಸಿರುವುದನ್ನು ಸ್ಮರಿಸಬಹುದಾಗಿದೆ.

ಫೆಲೆಸ್ತೀನಿಯರಿಗೆ ನೀಡುತ್ತಿದ್ದ ನೆರವನ್ನು ಅಮೆರಿಕ ಸ್ಥಗಿತಗೊಳಿಸಿರುವುದು, ಕ್ಯಾನ್ಸರ್ ರೋಗಿಗಳು ಮತ್ತು ಶಾಂತಿ ಪ್ರತಿಪಾದಕ ಗುಂಪುಗಳ ಮೇಲೂ ಪರಿಣಾಮ ಬೀರಿದೆ.

ಇದು ಭವಿಷ್ಯದ ಯಾವುದೇ ರಾಜಕೀಯ ಪರಿಹಾರದಿಂದ ಫೆಲೆಸ್ತೀನಿಯರನ್ನು ವಂಚಿತರನ್ನಾಗಿಸುತ್ತದೆ ಹಾಗೂ ಅವರನ್ನು ಅಗಾಧ ಒತ್ತಡಕ್ಕೆ ಸಿಲುಕಿಸುತ್ತದೆ ಎಂದು ಅರಬ್ ಲೀಗ್ ಮಹಾಕಾರ್ಯದರ್ಶಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News