ಇಸ್ರೇಲ್ ಸೈನಿಕರ ಗುಂಡಿಗೆ ಫೆಲೆಸ್ತೀನ್ ಬಾಲಕ ಬಲಿ

Update: 2018-09-20 17:39 GMT

ಗಾಝಾ, ಸೆ. 20: ದಕ್ಷಿಣ ಗಾಝಾ ಪಟ್ಟಿಯಲ್ಲಿ ಬುಧವಾರ ಪ್ರತಿಭಟನೆ ನಡೆಸುತ್ತಿದ್ದ ಫೆಲೆಸ್ತೀನಿಯರ ಮೇಲೆ ಇಸ್ರೇಲಿ ಪಡೆಗಳು ಗುಂಡು ಹಾರಿಸಿದಾಗ, ಓರ್ವ ಫೆಲೆಸ್ತೀನಿ ಬಾಲಕ ಮೃತಪಟ್ಟಿದ್ದಾನೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ದಕ್ಷಿಣ ಗಾಝಾ ಪಟ್ಟಿಯ ಗಡಿ ಬೇಲಿಯ ಸಮೀಪ ಫೆಲೆಸ್ತೀನಿಯರು ಇಸ್ರೇಲ್ ಸೈನಿಕರ ಮೇಲೆ ಕಲ್ಲುಗಳು ಮತ್ತು ಬೆಂಕಿಯುಂಡೆಗಳನ್ನು ಎಸೆದಾಗ ಸೈನಿಕರು ಅವರನ್ನು ಚದುರಿಸಲು ಕ್ರಮ ತೆಗೆದುಕೊಂಡರು ಎಂದು ಇಸ್ರೇಲ್ ಸೇನೆಯ ವಕ್ತಾರರೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News