ಉ. ಕೊರಿಯ ಜೊತೆ ಮಾತುಕತೆ ಪುನಾರಂಭಕ್ಕೆ ಸಿದ್ಧ: ಅಮೆರಿಕ

Update: 2018-09-20 17:47 GMT

ವಾಶಿಂಗ್ಟನ್, ಸೆ. 20: ಉತ್ತರ ಕೊರಿಯದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಲು ನಾವು ಸಿದ್ಧ ಎಂದು ಅಮೆರಿಕ ಹೇಳಿದೆ.

ಅಮೆರಿಕ ಪೂರಕ ಕ್ರಮಗಳನ್ನು ತೆಗೆದುಕೊಂಡರೆ, ನಮ್ಮ ಪ್ರಮುಖ ಕ್ಷಿಪಣಿ ಸ್ಥಾವರಗಳನ್ನು ನಾಶಗೊಳಿಸುತ್ತೇವೆ ಹಾಗೂ ಪ್ರಧಾನ ಯೊಂಗ್‌ಬ್ಯಾನ್ ಪರಮಾಣು ಆವರಣವನ್ನು ಮುಚ್ಚುತ್ತೇವೆ ಎಂಬುದಾಗಿ ಉತ್ತರ ಕೊರಿಯದ ಬುಧವಾರ ಹೇಳಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಮತ್ತು ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ-ಇನ್ ನಡುವೆ ಪ್ಯಾಂಗ್‌ಯಾಂಗ್‌ನಲ್ಲಿ ಮಂಗಳವಾರ ಮತ್ತು ಬುಧವಾರ ಶೃಂಗ ಸಮ್ಮೇಳನ ನಡೆದ ಬಳಿಕ ಉತ್ತರ ಕೊರಿಯ ಈ ಭರವಸೆಗಳನ್ನು ನೀಡಿದೆ.

  ಕೊರಿಯ ಪರ್ಯಾಯ ದ್ವೀಪವನ್ನು 2021ರ ವೇಳೆಗೆ ಪರಮಾಣುಮುಕ್ತಗೊಳಿಸುವ ಬಗ್ಗೆ ಮಾತುಕತೆ ನಡೆಸುವುದಕ್ಕಾಗಿ ಉತ್ತರ ಕೊರಿಯದ ವಿದೇಶ ಸಚಿವರನ್ನು ಮುಂದಿನ ವಾರ ನ್ಯೂಯಾರ್ಕ್‌ಗೆ ಆಹ್ವಾನಿಸಿದ್ದೇನೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News