ಸೌರಮಂಡಲದ ಹೊರಗೆ ಎರಡು ಗ್ರಹಗಳು ಪತ್ತೆ

Update: 2018-09-21 16:46 GMT

 ವಾಶಿಂಗ್ಟನ್, ಸೆ.21: ಅಮೆರಿಕದ ಫ್ಲೊರಿಡದಲ್ಲಿರುವ ಕೇಪ್ ಕನವೆರಲ್ ವಾಯುಪಡೆ ನಿಲ್ದಾಣದಿಂದ ಉಡಾಯಿಸಲ್ಪಟ್ಟ ನಾಸಾದ ದೂರಸಂಪರ್ಕ ಐದು ತಿಂಗಳ ನಂತರ ಸೌರ ಮಂಡಲದ ಹೊರಗಿರುವ ಎರಡು ಗ್ರಹಗಳನ್ನು ಪತ್ತೆಹಚ್ಚಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭೂಮಿಯಿಂದ 49 ಬೆಳಕಿನ ವರ್ಷ ದೂರವಿರುವ ಸೂಪರ್ ಅರ್ತ್ ಮತ್ತು ಹಾಟ್ ಅರ್ತ್ ಎಂಬ ಎರಡು ಗ್ರಹಗಳನ್ನು ಟೆಸ್ಸ್ ದೂರಸಂಪರ್ಕ ಪತ್ತೆ ಮಾಡಿರುವುದಾಗಿ ವರದಿ ತಿಳಿಸಿದೆ. ಸ್ಪೇಸ್‌ಎಕ್ಸ್ ಫಾಲ್ಕನ್9 ರಾಕೆಟ್ ಮೂಲಕ ಉಡಾಯಿಸಲ್ಪಟ್ಟ ಟೆಲಿಸ್ಕೋಪನ್ನು ಸೌರಮಂಡಲದಿಂದ ಹೊರಗಿರುವ ಗ್ರಹಗಳನ್ನು ಪತ್ತೆಹಚ್ಚಲೆಂದೇ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ವೆಚ್ಚ 2,440 ಕೋಟಿ ರೂ. ಆಗಿದೆ. ಸದ್ಯ ಪತ್ತೆಯಾಗಿರುವ ಗ್ರಹಗಳು ಹೆಚ್ಚು ಬಿಸಿಯಾಗಿದ್ದು ಅಲ್ಲಿ ಜೀವಿಗಳಿರಲು ಸಾಧ್ಯವಿಲ್ಲ. ಆದರೆ ಮುಂದೆ ಇಂಥ ಅನೇಕ ಅನ್ವೇಷಣೆಗಳು ನಡೆಯಲಿವೆ ಎಂದು ಟೆಸ್ಸ್‌ನ ಸಹಾಯಕ ವಿಜ್ಞಾನ ನಿರ್ದೇಶಕಿ ಸಾರಾ ಸೀಗರ್ ತಿಳಿಸಿದ್ದಾರೆ.

ಸದ್ಯ 60 ಬೆಳಕಿನ ವರ್ಷ ದೂರದಲ್ಲಿ ಪತ್ತೆಯಾಗಿರುವ ಸೂಪರ್ ಅರ್ತ್‌ಗೆ ಪಿ ಮೆನ್ಸಿ ಸಿ ಎಂದು ಹೆಸರಿಡಲಾಗಿದ್ದು ಇದು 6.3 ದಿನಗಳಲ್ಲಿ ತನ್ನ ಸೂರ್ಯನಿಗೆ ಸುತ್ತುಬರುತ್ತದೆ. ಎಲ್‌ಎಚ್‌ಎಸ್ 3844ಬಿ ಎಂದು ಹೆಸರಿಸಲಾಗಿರುವ ಹಾಟ್ ಅರ್ತ್ ಭೂಮಿಯಿಂದ 49 ಬೆಳಕಿನ ವರ್ಷ ದೂರವಿದ್ದು ತನ್ನ ಸೂರ್ಯನ ಸುತ್ತ 11 ಗಂಟೆಗಳಲ್ಲಿ ಸುತ್ತು ಹಾಕುತ್ತದೆ ಎಂದು ಸಾರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News