ಫಿಲಿಪ್ಪೀನ್ಸ್‌ನಲ್ಲಿ ಭೂಕುಸಿತ: ಕನಿಷ್ಠ 21 ಸಾವು

Update: 2018-09-21 17:34 GMT

ನಗ (ಫಿಲಿಪ್ಪೀನ್ಸ್), ಸೆ. 21: ಮಧ್ಯ ಫಿಲಿಪ್ಪೀನ್ಸ್‌ನ ಪರ್ವತವೊಂದರ ಸಮೀಪ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಹತ್ತಾರು ಮನೆಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ ಹಾಗೂ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ.

ಮಣ್ಣಿನಡಿಯಲ್ಲಿ ಸಿಕ್ಕಿಹಾಕಿಕೊಂಡ ಕೆಲವರು ರಕ್ಷಣೆಗಾಗಿ ತುರ್ತು ಸಂದೇಶಗಳನ್ನು ಕಳುಹಿಸಿದ ಬಳಿಕ, ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ಸೆಬು ರಾಜ್ಯದ ನಗ ನಗರದಲ್ಲಿರುವ ಎರಡು ಗ್ರಾಮಗಳ ಸುಮಾರು 30 ಮನೆಗಳ ಮೇಲೆ ಪರ್ವತದ ಮಣ್ಣು ಕುಸಿದಿದೆ.

ಮಣ್ಣು ಮತ್ತು ಅವಶೇಷಗಳ ಬೃಹತ್ ರಾಶಿಯಿಂದ ಏಳು ಗ್ರಾಮಸ್ಥರನ್ನು ಹೊರಗೆ ತೆಗೆಯಲಾಗಿದೆ.

ಕನಿಷ್ಠ 64 ಮಂದಿ ನಾಪತ್ತೆಯಾಗಿದ್ದಾರೆ ಎಂದು ನಗ ನಗರದ ಮೇಯರ್ ಕ್ರಿಸ್ಟೀನ್ ವೆನೆಸ ಚಿಯಾಂಗ್ ತಿಳಿಸಿದರು. ‘‘ಅವರನ್ನು ಜೀವಂತವಾಗಿ ಹೊರಗೆ ತೆಗೆಯುವ ಬಗ್ಗೆ ನಾವು ಭರವಸೆ ಹೊಂದಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News