ಇಸ್ರೇಲ್‌ನಿಂದ ಫೆಲೆಸ್ತೀನ್ ಗ್ರಾಮದ ಧ್ವಂಸ ಕಾರ್ಯಾಚರಣೆ

Update: 2018-09-21 17:45 GMT

ವಿಶ್ವಸಂಸ್ಥೆ, ಸೆ. 21: ಖಾನ್ ಅಲ್-ಅಹ್ಮರ್ ಎಂಬ ಫೆಲೆಸ್ತೀನ್ ಗ್ರಾಮವನ್ನು ಧ್ವಂಸಗೊಳಿಸುವ ಇಸ್ರೇಲ್‌ನ ಯೋಜನೆಗೆ ಐರೋಪ್ಯ ಒಕ್ಕೂಟದ 8 ದೇಶಗಳು ವಿರೋಧ ವ್ಯಕ್ತಪಡಿಸಿವೆ ಹಾಗೂ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಇಸ್ರೇಲ್ ಸರಕಾರವನ್ನು ಒತ್ತಾಯಿಸಿವೆ.

ಇದಕ್ಕೆ ಸಂಬಂಧಿಸಿದ ಹೇಳಿಕೆಯೊಂದನ್ನು ವಿಶ್ವಸಂಸ್ಥೆಗೆ ನೆದರ್‌ಲ್ಯಾಂಡ್‌ನ ರಾಯಭಾರಿ ಕ್ಯಾರಲ್ ವಾನ್ ಊಸ್ಟರೊಮ್ ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಚೇರಿಯ ಹೊರಗೆ ಓದಿದರು.

ಫೆಲೆಸ್ತೀನ್‌ನ ಮರುಭೂಮಿ ಗ್ರಾಮವನ್ನು ಧ್ವಂಸಗೊಳಿಸುವಂತೆ ಇಸ್ರೇಲ್ ಹೈಕೋರ್ಟ್ ಸೆಪ್ಟಂಬರ್ 5ರಂದು ನೀಡಿದ ತೀರ್ಪನ್ನು ಅವರು ಖಂಡಿಸಿದರು.

ಧ್ವಂಸವನ್ನು ವಿರೋಧಿಸುವ 8 ದೇಶಗಳೆಂದರೆ-ಫ್ರಾನ್ಸ್, ನೆದರ್‌ಲ್ಯಾಂಡ್ಸ್, ಪೋಲ್ಯಾಂಡ್, ಸ್ವೀಡನ್, ಬ್ರಿಟನ್ ಬೆಲ್ಜಿಯಮ್, ಜರ್ಮನಿ ಮತ್ತು ಇಟಲಿ.

ಇಸ್ರೇಲ್ ಮತ್ತು ನೂತನ ಫೆಲೆಸ್ತೀನ್- ಎರಡೂ ದೇಶಗಳಿಗೆ ಜೆರುಸಲೇಮನ್ನು ರಾಜಧಾನಿಯಾಗಿರುವ ದ್ವಿರಾಷ್ಟ್ರ ಪರಿಹಾರವನ್ನು ಈ ದೇಶಗಳು ಬಿಟ್ಟುಕೊಡುವುದಿಲ್ಲ ಎಂದು ಈ ದೇಶಗಳು ಹೇಳಿಕೆಯೊಂದರಲ್ಲಿ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News