ಬೆಂಕಿಯ ಜೊತೆ ಆಟ ಬೇಡ: ಅಮೆರಿಕಕ್ಕೆ ರಶ್ಯ ಎಚ್ಚರಿಕೆ

Update: 2018-09-21 17:53 GMT

ಮಾಸ್ಕೊ, ಸೆ. 21: ಅಮೆರಿಕದ ರಶ್ಯ ವಿರೋಧಿ ದಿಗ್ಬಂಧನಗಳು ಜಾಗತಿಕ ಸ್ಥಿರತೆಯನ್ನು ದುರ್ಬಲಗೊಳಿಸಿವೆ ಎಂದು ರಶ್ಯ ಶುಕ್ರವಾರ ಬಣ್ಣಿಸಿದೆ ಹಾಗೂ ‘ಬೆಂಕಿಯ ಜೊತೆ ಆಟ ಆಡದಂತೆ’ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

‘‘ಜಾಗತಿಕ ಸ್ಥಿರತೆ ಎಂಬ ಕಲ್ಪನೆಯೊಂದಿದೆ ಎಂಬುದನ್ನು ನೆನಪು ಮಾಡಿಕೊಂಡರೆ ಅವರಿಗೆ ಒಳ್ಳೆಯದು. ರಶ್ಯ-ಅಮೆರಿಕ ಬಾಂಧವ್ಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುವ ಮೂಲಕ ಅವರು ವಿವೇಚನಾರಹಿತವಾಗಿ ಜಾಗತಿಕ ಸ್ಥಿರತೆಯನ್ನು ದುರ್ಬಲಗೊಳಿಸುತ್ತಿದ್ದಾರೆ’’ ಎಂದು ರಶ್ಯದ ಉಪ ವಿದೇಶ ಸಚಿವ ಸರ್ಗಿ ರ್ಯಬಕೊವ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಬೆಂಕಿಯೊಂದಿಗೆ ಆಟವಾಡುವುದು ಮೂರ್ಖತನ. ಅದು ಅಪಾಯಕಾರಿಯಾಗಬಹುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News