ಚೀನಾ ಬಗ್ಗೆ ನಿಲುವು ತೆಗೆದುಕೊಳ್ಳಲು ಸಕಾಲ: ಟ್ರಂಪ್

Update: 2018-09-21 17:54 GMT

ವಾಶಿಂಗ್ಟನ್, ಸೆ. 21: ಚೀನಾದ ವಸ್ತುಗಳ ಮೇಲೆ ಇನ್ನೊಂದು ಸುತ್ತಿನ ಆಮದು ಸುಂಕವನ್ನು ವಿಧಿಸಿದ ದಿನಗಳ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಕೆಂಡ ಕಾರುವುದನ್ನು ಮುಂದುವರಿಸಿದ್ದಾರೆ ಹಾಗೂ ವ್ಯಾಪಾರ ಸಮರ ಸದ್ಯಕ್ಕೆ ಮುಗಿಯುವುದಿಲ್ಲ ಎಂಬ ಸೂಚನೆಯನ್ನು ನೀಡಿದ್ದಾರೆ.

‘‘ಇದು ಚೀನಾದ ಬಗ್ಗೆ ನಿಲುವೊಂದನ್ನು ತೆಗೆದುಕೊಳ್ಳಲು ಸಕಾಲ’’ ಎಂದು ಗುರುವಾರ ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.

‘‘ನಮಗೆ ಬೇರೆ ಆಯ್ಕೆಯಿಲ್ಲ. ಆಗಲೇ ತುಂಬಾ ಹೊತ್ತಾಗಿದೆ. ಅವರು ನಮ್ಮನ್ನು ಘಾಸಿಗೊಳಿಸುತ್ತಿದ್ದಾರೆ’’ ಎಂದು ಟ್ರಂಪ್ ಹೇಳಿದ್ದಾರೆ.

ಚೀನಾದಿಂದ ಆಮದು ಮಾಡಲಾಗುವ 200 ಬಿಲಿಯ ಡಾಲರ್ ವೌಲ್ಯದ ವಸ್ತುಗಳ ಮೇಲೆ ಟ್ರಂಪ್ ಆಡಳಿತ 10 ಶೇಕಡ ಹೆಚ್ಚುವರಿ ತೆರಿಗೆಯನ್ನು ವಿಧಿಸಿದೆ ಹಾಗೂ ಇದು ಮುಂದಿನ ವರ್ಷ 25 ಶೇಕಡಕ್ಕೆ ಹೆಚ್ಚಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News