ಪ್ರಯಾಣ ನಿಷೇಧ ಬಗ್ಗೆ ಚರ್ಚಿಸಿದ್ದ ‘ಗೂಗಲ್’ ಉದ್ಯೋಗಿಗಳು

Update: 2018-09-21 17:58 GMT

ನ್ಯೂಯಾರ್ಕ್, ಸೆ. 21: ಕೆಲವು ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2017ರಲ್ಲಿ ಹೊರಡಿಸಿದ ಆದೇಶವನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ಗೂಗಲ್ ಉದ್ಯೋಗಿಗಳು ಚರ್ಚೆ ನಡೆಸಿದ್ದರು ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಶುಕ್ರವಾರ ವರದಿ ಮಾಡಿದೆ.

ವಲಸಿಗರ ಪರವಾಗಿ ಕೆಲಸ ಮಾಡುವ ಗುಂಪುಗಳಿಗೆ ನೆರವು ನೀಡಲು ಹಾಗೂ ಸಂಸದರನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ‘ಸರ್ಚ್’ ವಿಧಾನದಲ್ಲಿ ಹೇಗೆ ಮಾರ್ಪಾಡುಗಳನ್ನು ತರಬಹುದು ಎಂಬ ಬಗ್ಗೆ ಅವರು ಮಾತುಕತೆ ನಡೆಸಿದ್ದರು ಎಂದು ಪತ್ರಿಕೆ ಹೇಳಿದೆ.

ಮುಖ್ಯವಾಗಿ ಏಳು ಮುಸ್ಲಿಮ್ ದೇಶಗಳನ್ನು ಗುರಿಯಾಗಿಸಿ ಮೊದಲ ಪ್ರಯಾಣ ನಿಷೇಧವನ್ನು ಟ್ರಂಪ್ ಆಡಳಿತ ಜಾರಿಗೆ ತಂದ ಎರಡು ದಿನಗಳ ಬಳಿಕ ಉದ್ಯೋಗಿಗಳು ಇಮೇಲ್ ಮೂಲಕ ಚರ್ಚೆ ಮಾಡಿದ್ದರು ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News