ತಾಂಝಾನಿಯ: ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 207ಕ್ಕೆ ಏರಿಕೆ
Update: 2018-09-23 22:38 IST
ಉಕಾರ (ತಾಂಝಾನಿಯ), ಸೆ. 23: ತಾಂಝಾನಿಯದ ವಿಕ್ಟೋರಿಯ ಸರೋವರದಲ್ಲಿ ಗುರುವಾರ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 207ಕ್ಕೆ ಏರಿದೆ.
ಮುಳುಗುಗಾರರು ಶನಿವಾರ ಮಗುಚಿದ ದೋಣಿಯ ಒಳಗಿನಿಂದ ಓರ್ವ ವ್ಯಕ್ತಿಯನ್ನು ರಕ್ಷಿಸಿದರು.
ದೋಣಿಯ ಸುತ್ತಮುತ್ತ ಮೃತದೇಹಗಳು ನಿರಂತರವಾಗಿ ಮೇಲಕ್ಕೆ ಬರುತ್ತಿವೆ.
ದೋಣಿಯು 300ಕ್ಕೂ ಅಧಿಕ ಜನರನ್ನು ಹೊತ್ತು ಸಾಗುತ್ತಿತ್ತು ಎಂಬುದಾಗಿ ಹೇಳಲಾಗಿದೆ.
ಮುಳುಗಿದ ದೋಣಿಯ ಒಳಗಿನಿಂದ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ನೌಕಾ ಪಡೆ ಮುಳುಗುಗಾರರು ಶನಿವಾರ ಮುಳುಗಿದ ದೋಣಿಯ ಒಳಗಡೆ ಶೋಧ ನಡೆಸಿದರು.
ಅವರು ಓರ್ವ ವ್ಯಕ್ತಿಯನ್ನು ಮಗುಚಿದ ದೋಣಿಯ ಒಳಗಿನಿಂದ ಹೊರಗೆಳೆದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ತಿಳಿದುಬಂದಿಲ್ಲ.