ಪರಮಾಣುಮುಕ್ತ ಕೊರಿಯವರೆಗೆ ಆರ್ಥಿಕ ದಿಗ್ಬಂಧನ: ಪಾಂಪಿಯೊ

Update: 2018-09-23 17:14 GMT

ವಾಶಿಂಗ್ಟನ್, ಸೆ. 23: ಕೊರಿಯ ಪರ್ಯಾಯ ದ್ವೀಪವು ಪರಮಾಣುಮುಕ್ತವಾಗುವವರೆಗೆ ಉತ್ತರ ಕೊರಿಯದ ಮೇಲಿನ ಆರ್ಥಿಕ ದಿಗ್ಬಂಧನಗಳು ಮುಂದುವರಿಯುವುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

 ‘‘ನಾವು ಕೊನೆಯನ್ನು ತಲುಪುವವರೆಗೆ, ಉತ್ತರ ಕೊರಿಯ ಚೇರ್‌ಮನ್ ಕಿಮ್ ಜಾಂಗ್ ಉನ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೀಡಿರುವ ಭರವಸೆಯಂತೆ ಅಂತಿಮ ಪರಮಾಣು ನಿಶ್ಶಸ್ತ್ರೀಕರಣ ಸಾಧ್ಯವಾಗುವವರೆಗೆ ಆರ್ಥಿಕ ದಿಗ್ಬಂಧನಗಳು ಜಾರಿಯಲ್ಲಿರುತ್ತವೆ’’ ಎಂದು ಶುಕ್ರವಾರ ಎಂಎಸ್‌ಎನ್‌ಬಿಸಿಗೆ ನೀಡಿದ ಸಂದರ್ಶನವೊಂದರಲ್ಲಿ ಪಾಂಪಿಯೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News