ಹಿನ್ನಡೆಗೆ ಇಮ್ರಾನ್ ಸರಕಾರವೇ ಹೊಣೆ: ಪಾಕ್ ಪ್ರತಿಪಕ್ಷ

Update: 2018-09-23 17:19 GMT

ಇಸ್ಲಾಮಾಬಾದ್, ಸೆ. 23: ಭಾರತದೊಂದಿಗಿನ ರಾಜತಾಂತ್ರಿಕ ಹಿನ್ನಡೆಗೆ ಇಮ್ರಾನ್ ಖಾನ್ ಸರಕಾರವೇ ಹೊಣೆ ಎಂದು ಪಾಕಿಸ್ತಾನದ ಎರಡು ಪ್ರಮುಖ ಪ್ರತಿಪಕ್ಷಗಳು ಆರೋಪಿಸಿವೆ.

ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಗಳ ವಿದೇಶ ಸಚಿವರ ಸಭೆಯ ಪ್ರಸ್ತಾಪವನ್ನು ಭಾರತ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಸಭೆ ನಡೆಸುವ ಪ್ರಸ್ತಾಪದೊಂದಿಗೆ ಭಾರತವನ್ನು ಸಂಪರ್ಕಿಸುವ ಮುನ್ನ ಸರಕಾರ ಸಿದ್ಧತೆ ನಡೆಸಿಲ್ಲ ಹಾಗೂ ಪರಿಸ್ಥಿತಿಯ ಅಂದಾಜು ಮಾಡಿಲ್ಲ ಎಂದು ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ ಮತ್ತು ಪಾಕಿಸ್ತಾಮ ಪೀಪಲ್ಸ್ ಪಾರ್ಟಿಯ ನಾಯಕರು ಆರೋಪಿಸಿದ್ದಾರೆ.

ಮಾತುಕತೆಯ ಕೊಡುಗೆಯನ್ನು ಮುಂದಿಟ್ಟು ಪ್ರಧಾನಿ ನರೇಂದ್ರ ಮೋದಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬರೆದಿರುವ ಪತ್ರ ‘ತಪ್ಪು ಹೆಜ್ಜೆ’ಯಾಗಿದೆ ಎಂಬುದಾಗಿ ಅವರು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News