ಹೊಸ ಮೈಲುಗಲ್ಲು ತಲುಪಿದ ರೋಹಿತ್ ಶರ್ಮಾ

Update: 2018-09-24 11:57 GMT

ದುಬೈ, ಸೆ.24: ಭಾರತದ ಹಂಗಾಮಿ ನಾಯಕ ರೋಹಿತ್ ಶರ್ಮಾ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು ಏಕದಿನ ಕ್ರಿಕೆಟ್‌ನಲ್ಲಿ 7,000 ರನ್ ಪೂರೈಸಿದ ಏಳನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾದರು.

ರವಿವಾರ ಪಾಕಿಸ್ತಾನ ವಿರುದ್ಧದ ಸೂಪರ್-4 ಪಂದ್ಯದ ವೇಳೆ ರೋಹಿತ್ ಈ ಮೈಲುಗಲ್ಲು ತಲುಪಿದರು. ರೋಹಿತ್‌ಗೆ 7,000 ರನ್ ಪೂರೈಸಲು 94 ರನ್‌ಗಳ ಅಗತ್ಯವಿತ್ತು. 19ನೇ ಶತಕವನ್ನು ಸಿಡಿಸಿದ ರೋಹಿತ್ 7,000 ರನ್ ಪೂರೈಸಲು ಯಶಸ್ವಿಯಾದರು.

ಏಕದಿನ ಕ್ರಿಕೆಟ್‌ನಲ್ಲಿ 7,000ಕ್ಕೂ ಅಧಿಕ ರನ್ ಗಳಿಸಿದ ಭಾರತದ ಇತರ ಆಟಗಾರರೆಂದರೆ: ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ, ರಾಹುಲ್ ದ್ರಾವಿಡ್, ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ, ಮುಹಮ್ಮದ್ ಅಝರುದ್ದೀನ್, ಯುವರಾಜ್ ಸಿಂಗ್ ಹಾಗೂ ವೀರೇಂದ್ರ ಸೆಹ್ವಾಗ್.

ರೋಹಿತ್ ಈಗ ನಡೆಯುತ್ತಿರುವ ಏಶ್ಯಕಪ್‌ನಲ್ಲಿ ಸತತ 3ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದರು. ಮುಂಬೈ ದಾಂಡಿಗ ಮೊದಲ ಪಂದ್ಯದಲ್ಲಿ 52, 2ನೇ ಪಂದ್ಯದಲ್ಲಿ 83 ಹಾಗೂ ಮೂರನೇ ಪಂದ್ಯದಲ್ಲಿ ಔಟಾಗದೆ 111 ರನ್ ಕಲೆ ಹಾಕಿದ್ದಾರೆ. ಪಾಕ್ ವಿರುದ್ಧ 119 ಎಸೆತಗಳನ್ನು ಎದುರಿಸಿದ್ದ ರೋಹಿತ್ 7 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ಸಹಿತ ಔಟಾಗದೆ 111 ರನ್ ಗಳಿಸಿದರು.

19ನೇ ಶತಕವನ್ನು ಸಿಡಿಸಿದ ರೋಹಿತ್ ಅವರು ಬ್ರಿಯಾನ್ ಲಾರಾ, ಮಹೇಲ ಜಯವರ್ಧನೆ ಹಾಗೂ ರಾಸ್ ಟೇಲರ್ ಶತಕದ ಸಾಧನೆ ಯನ್ನು ಸರಿಗಟ್ಟಿದರು. ರೋಹಿತ್ 181ನೇ ಇನಿಂಗ್ಸ್‌ನಲ್ಲಿ 7 ಸಾವಿರ ರನ್ ಪೂರೈಸಿ ವೇಗವಾಗಿ ಈ ಸಾಧನೆ ಮಾಡಿದ ಭಾರತದ ಮೂರನೇ ಆಟಗಾರ ಎನಿಸಿಕೊಂಡರು. ವಿರಾಟ್ ಕೊಹ್ಲಿ(161) ಹಾಗೂ ಸೌರವ್ ಗಂಗುಲಿ(174)ಮೊದಲೆರಡು ಸ್ಥಾನದಲ್ಲಿದ್ದಾರ. ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ(150 ಇನಿಂಗ್ಸ್)ವೇಗವಾಗಿ 7 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ದಾಂಡಿಗನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News