ಮೆಹುಲ್ ಚೋಕ್ಸಿ ಗಡಿಪಾರಿಗೆ ಸಂಪೂರ್ಣ ಸಹಕಾರ: ಸುಶ್ಮಾ ಸ್ವರಾಜ್‌ಗೆ ಆ್ಯಂಟಿಗುವಾ ಭರವಸೆ

Update: 2018-09-27 17:00 GMT

ನ್ಯೂಯಾರ್ಕ್, ಸೆ. 27: ಭಾರತದಲ್ಲಿ ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯ ಗಡಿಪಾರು ವಿಚಾರದಲ್ಲಿ ನಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಆ್ಯಂಟಿಗುವಾ ಸರಕಾರ ಭಾರತಕ್ಕೆ ಭರವಸೆ ನೀಡಿದೆ ಹಾಗೂ ಈ ವಿಷಯವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಇತ್ಯರ್ಥಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದೆ.

ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 73ನೇ ಮಹಾಧಿವೇಶನದ ನೇಪಥ್ಯದಲ್ಲಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಆ್ಯಂಟಿಗುವಾ ಮತ್ತು ಬಾರ್ಬೂಡದ ವಿದೇಶ ಸಚಿವ ಇ.ಪಿ. ಚೇಟ್ ಗ್ರೀನ್‌ರನ್ನು ಭೇಟಿಯಾದ ವೇಳೆ, ಚೋಕ್ಸಿಯ ಗಡಿಪಾರು ವಿಷಯವನ್ನು ಪ್ರಸ್ತಾಪಿಸಿದರು.

ಚೊಕ್ಸಿ ಈಗ ಆ್ಯಂಟಿಗುವಾ ದಲ್ಲಿ ಇದ್ದಾರೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ಆಗಿರುವ 14,500 ಕೋಟಿ ರೂಪಾಯಿ ವಂಚನೆಯಲ್ಲಿ ಆತ ಪಾಲುದಾರನಾಗಿದ್ದಾನೆ.

‘‘ಮೆಹುಲ್ ಚೊಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವ ವಿಷಯದಲ್ಲಿ ಆ್ಯಂಟಿಗುವಾ ಸರಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂಬ ಆ ದೇಶದ ಪ್ರಧಾನಿಯ ಭರವಸೆಯನ್ನು ವಿದೇಶ ಸಚಿವ ಗ್ರೀನ್ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ಗೆ ತಲುಪಿಸಿದ್ದಾರೆ’’ ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News