ಭಾರತ ಮೂಲದ ತರುಣಿಗೆ ಸಾಮಾಜಿಕ ‘ಆಸ್ಕರ್’ ಪ್ರಶಸ್ತಿ
Update: 2018-09-27 22:34 IST
ನ್ಯೂಯಾರ್ಕ್, ಸೆ. 27: ಶಾಲೆಗಳಲ್ಲಿ ಬಡ ಬಾಲಕಿಯರಿಗೆ ಉಚಿತವಾಗಿ ಸ್ವಚ್ಛತಾ ಪರಿಕರಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ‘ಫ್ರೀ-ಪೀರಿಯಡ್ಸ್’ ಆಂದೋಲನ ನಡೆಸಿದ 18 ವರ್ಷದ ಅಮಿಕಾ ಜಾರ್ಜ್‌ಗೆ ‘ಗೋಲ್‌ಕೀಪರ್ಸ್ ಗ್ಲೋಬಲ್ ಗೋಲ್ಸ್ ಪ್ರಶಸ್ತಿ’ ಲಭಿಸಿದೆ.
ಇದು ಸಾಮಾಜಿಕ ಪ್ರಗತಿಗಾಗಿನ ಆಸ್ಕರ್ಸ್ ಪ್ರಶಸ್ತಿ ಎಂಬುದಾಗಿ ಪ್ರಸಿದ್ಧವಾಗಿದೆ.
ಆಮಿಕಾರ ಕರೆಗೆ ಓಗೊಟ್ಟು 2017ರಲ್ಲಿ ಬ್ರಿಟನ್‌ನ ಡೌನಿಂಗ್ ಸ್ಟ್ರೀಟ್‌ನಲ್ಲಿ ಅವರ ಅಜ್ಜ ಸೇರಿದಂತೆ 2,000ಕ್ಕೂ ಅಧಿಕ ಚಳವಳಿಗಾರರು ಧರಣಿ ನಡೆಸಿದ್ದರು.
ಇರಾಕ್‌ನಲ್ಲಿ ಐಸಿಸ್ ನಡೆಸಿದ ಹತ್ಯಾಕಾಂಡದಲ್ಲಿ ಬದುಕುಳಿದ ಯಾಝಿದಿ ಯುವತಿ 24 ವರ್ಷದ ನಾದಿಯಾ ಮುರಾದ್ ಮತ್ತು 28 ವರ್ಷದ ಕೆನ್ಯ ಯುವಕ ಡೈಸ್ಮಸ್ ಕಿಸಿಲು ಪ್ರಶಸ್ತಿ ಪಡೆದುಕೊಂಡ ಇತರರು.
ಕಿಸಿಲು ಅವರ ನವೀಕರಿಸಬಹುದಾದ ಇಂಧನವು ಕೆನ್ಯದ ಸಣ್ಣ ರೈತರ ಇಳುವರಿಯನ್ನು 150 ಶೇಕಡದಷ್ಟು ಹೆಚ್ಚಿಸಿದೆ.
‘ಗೋಲ್‌ಕೀಪರ್ಸ್’ ಪ್ರಶಸ್ತಿಯನ್ನು ಬಿಲ್ ಮತ್ತು ಮೆಲಿಂಡಾ ಫೌಂಡೇಶನ್ 2017ರಲ್ಲಿ ಸ್ಥಾಪಿಸಿದೆ.