ಜೀವಬೆದರಿಕೆ ಆರೋಪ: ಗನ್ ಮ್ಯಾನ್ ಬೇಕೆಂದ ಕ್ರಿಕೆಟಿಗ ಶಮಿ

Update: 2018-10-01 16:30 GMT

ಹೊಸದಿಲ್ಲಿ, ಅ.1: ತನ್ನ ಪತ್ನಿ ಹಸಿನ್ ಜಹಾನ್ ರಿಂದ ಜೀವಬೆದರಿಕೆಯಿದೆ ಎಂದು ಆರೋಪಿಸಿರುವ ಭಾರತದ ಕ್ರಿಕೆಟಿಗ ಮುಹಮ್ಮದ್ ಶಮಿ ಗನ್ ಮ್ಯಾನ್ ನೀಡಬೇಕೆಂದು ಮನವಿ ಮಾಡಿದ್ದಾರೆ.

ಮುಹಮ್ಮದ್ ಶಮಿಗೆ ಅಕ್ರಮ ಸಂಬಂಧಿವಿದೆ ಎಂದು ಆರೋಪಿಸಿ ಪತ್ನಿ ಹಸಿನ್ 2018ರ ಮಾರ್ಚ್ ನಲ್ಲಿ ಶಮಿಯವರ ಚಾಟ್ ಗಳ ಸ್ಕ್ರೀನ್ ಶಾಟ್ ಗಳನ್ನು ಪೋಸ್ಟ್ ಮಾಡಿದ್ದ ನಂತರ ವಿವಾದ ಆರಂಭವಾಗಿತ್ತು. ಈ ಆರೋಪಗಳನ್ನು ನಿರಾಕರಿಸಿದ್ದ ಶಮಿ ತನ್ನ  ಹೆಸರಿಗೆ ಮಸಿ ಬಳಿಯಲು ನಡೆಸಿದ ಷಡ್ಯಂತ್ರ ಎಂದು ಆರೋಪಿಸಿದ್ದರು.

ಆದರೆ ಇದೀಗ ಹೊಸ ಬೆಳವಣಿಗೆಯೊಂದರಲ್ಲಿ ಶಮಿ ಗನ್ ಮ್ಯಾನ್ ಗೆ ಬೇಡಿಕೆಯಿರಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News