ಅಮೆರಿಕದ ಚುನಾವಣೆಯಲ್ಲಿ ಚೀನಾದಿಂದ ಹಸ್ತಕ್ಷೇಪ: ಉಪಾಧ್ಯಕ್ಷ ಪೆನ್ಸ್ ಆರೋಪ

Update: 2018-10-05 16:37 GMT

ವಾಶಿಂಗ್ಟನ್, ಅ. 5: ಚೀನಾವು ಸೇನಾ ಆಕ್ರಮಣ, ವಾಣಿಜ್ಯ ಕಳ್ಳತನ ಮತ್ತು ಮಾನವಹಕ್ಕು ಉಲ್ಲಂಘನೆಯಲ್ಲಿ ತೊಡಗಿದೆ ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಗುರುವಾರ ಆರೋಪಿಸಿದ್ದಾರೆ. ಅಮೆರಿಕದಲ್ಲಿ ಮುಂಬರುವ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ ಎಂದಿದ್ದಾರೆ.

 ಕಳೆದ ವಾರ ವಿಶ್ವಸಂಸ್ಥೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಮಾಡಿರುವ ಆರೋಪಗಳ ಪಟ್ಟಿಯನ್ನು ಹಿಗ್ಗಿಸಿದ ಪೆನ್ಸ್, ನವೆಂಬರ್ 6ರಂದು ಕಾಂಗ್ರೆಸ್‌ಗೆ ನಡೆಯಲಿರುವ ಮಹತ್ವದ ಚುನಾವಣೆಯಲ್ಲಿ ಅಮೆರಿಕದ ಜನಾಭಿಪ್ರಾಯದ ಮೇಲೆ ಪ್ರಭಾವ ಬೀರಲು ಚೀನಾ ಅಭೂತಪೂರ್ವ ಪ್ರಯತ್ನಗಳನ್ನು ನಡೆಸುತ್ತಿದೆ ಎಂದರು.

‘‘ಇದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಬೇಕಾದರೆ, ಅಧ್ಯಕ್ಷ ಟ್ರಂಪ್‌ರ ನಾಯಕತ್ವ ಪರಿಣಾಮ ಬೀರುತ್ತಿದೆ ಹಾಗೂ ಚೀನಾ ಬೇರೊಬ್ಬ ಅಧ್ಯಕ್ಷರನ್ನು ಬಯಸುತ್ತಿದೆ’’ ಎಂದು ‘ಹಡ್ಸನ್ ಇನ್‌ಸ್ಟಿಟ್ಯೂಟ್’ನಲ್ಲಿ ಮಾಡಿದ ಭಾಷಣದಲ್ಲಿ ಪೆನ್ಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News