ತಾಲಿಬಾನನ್ನು ಮಾತುಕತೆಯ ಮೇಜಿಗೆ ತರಲು ಪಾಕ್ ಪ್ರಭಾವ ಬೀರಲಿ: ಅಮೆರಿಕ

Update: 2018-10-05 16:41 GMT

ವಾಶಿಂಗ್ಟನ್, ಅ. 5: ತಾಲಿಬಾನನ್ನು ಮಾತುಕತೆಯ ಮೇಜಿಗೆ ಕರೆತರಲು ಪಾಕಿಸ್ತಾನ ತಾಲಿಬಾನ್ ಮೇಲೆ ಪ್ರಭಾವ ಬೀರಬೇಕು ಹಾಗೂ ತಾಲಿಬಾನ್ ನಾಯಕರ ಗಡಿಯಾಚೆಗಿನ ಒಡಾಟವನ್ನು ನಿಲ್ಲಿಸಬೇಕು ಎಂದು ಅಮೆರಿಕದ ಉನ್ನತ ಸೇನಾಧಿಕಾರಿಯೊಬ್ಬರು ಗುರುವಾರ ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಖುರೇಶಿ ಅಮೆರಿಕದಲ್ಲಿ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸ್ವದೇಶಕ್ಕೆ ವಾಪಸಾದ ಒಂದು ದಿನದ ಬಳಿಕ ಅಮೆರಿಕ ಸೆಂಟ್ರಲ್ ಕಮಾಂಡ್‌ನ ಕಮಾಂಡರ್ ಜನರಲ್ ಜೋಸೆಫ್ ವೊಟೆಲ್ ರಕ್ಷಣಾ ಇಲಾಖೆಯ ಕಚೇರಿ ಪೆಂಟಗನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

 ‘‘ಈ ವಿಷಯದ ಬಗ್ಗೆ ನಾವು ಪಾಕಿಸ್ತಾನದ ಸೇನಾ ನಾಯಕತ್ವದೊಂದಿಗೆ ಯಾವಾಗಲೂ ಮಾತನಾಡುತ್ತಿರುತ್ತೇವೆ. ತನ್ನ ಎಂದಿನ ಕೆಲಸವನ್ನು ಮುಂದುವರಿಸುವಂತೆ ನಾವು ಕೋರಿದ್ದೇವೆ. ಅಫ್ಘಾನಿಸ್ತಾನದಲ್ಲಿನ ಹಿಂಸೆಯನ್ನು ಕಡಿಮೆ ಮಾಡುವಲ್ಲಿ ನಮಗೆ ಅವರ ನೆರವಿನ ಅಗತ್ಯವಿದೆ’’ ಎಂದರು.

‘‘ತಾಲಿಬಾನ್ ಉಗ್ರರು ಗಡಿಯ ಆಚೀಚೆ ಚಲಿಸದಂತೆ ಹಾಗೂ ಅಫ್ಘಾನಿಸ್ತಾನದಲ್ಲಿ ಗಾಯಗೊಂಡ ಉಗ್ರರು ಚಿಕಿತ್ಸೆಗಾಗಿ ಪಾಕಿಸ್ತಾನಕ್ಕೆ ಬರದಂತೆ ಅದು ಖಾತರಿಪಡಿಸಬೇಕು’’ ಎಂದು ಜನರಲ್ ವೊಟೆಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News