ಭ್ರಷ್ಟಾಚಾರ: 12ನೇ ಬಾರಿಗೆ ನೆತನ್ಯಾಹು ವಿಚಾರಣೆ

Update: 2018-10-05 16:43 GMT

ಜೆರುಸಲೇಮ್, ಅ. 5: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಇಸ್ರೇಲ್ ಪೊಲೀಸರು ಶುಕ್ರವಾರ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು 12ನೇ ಬಾರಿಗೆ ಪ್ರಶ್ನಿಸಿದ್ದಾರೆ.

ನೆತನ್ಯಾಹುರ ಜೆರುಸಲೇಮ್‌ನಲ್ಲಿರುವ ಅಧಿಕೃತ ನಿವಾಸಕ್ಕೆ ಪೊಲೀಸ್ ತನಿಖಾಧಿಕಾರಿಗಳು ಪ್ರವೇಶಿಸುವುದನ್ನು ಖಾಸಗಿ ಟಿವಿ ಚಾನೆಲ್ ‘ಚಾನೆಲ್ 10’ ತೋರಿಸಿದೆ.

ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ನೆತನ್ಯಾಹು ವಿರುದ್ಧ ದೋಷಾರೋಪ ಹೊರಿಸಲು ಪೊಲೀಸರು ಈಗಾಗಲೇ ಶಿಫಾರಸು ಮಾಡಿದ್ದಾರೆ. ಶುಕ್ರವಾರ ಅದೇ ಪ್ರಕ್ರಿಯೆಯನ್ನು ಮುಂದುವರಿಸಲಾಯಿತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News