ಪಾಕ್: ಪ್ರತಿಪಕ್ಷ ನಾಯಕ ಶಹಬಾಝ್ ಶರೀಫ್ ಬಂಧನ

Update: 2018-10-05 16:59 GMT

ಲಾಹೋರ್, ಅ. 5: ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ ಪಾಕಿಸ್ತಾನದ ಪ್ರತಿಪಕ್ಷ ನಾಯಕ ಶಹಬಾಝ್ ಶರೀಫ್‌ರನ್ನು ದೇಶದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಶುಕ್ರವಾರ ಬಂಧಿಸಿದೆ.

67 ವರ್ಷದ ಶಹಬಾಝ್ ಶರೀಫ್ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ತಮ್ಮ.

‘‘ಶಹಬಾಝ್ ಶರೀಫ್ ಶುಕ್ರವಾರ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ ಲಾಹೋರ್‌ನ ತನಿಖಾ ತಂಡವೊಂದರ ಎದುರು ಹಾಜರಾದರು. ಅಶಿಯಾನ ವಸತಿ ಯೋಜನೆ ಮತ್ತು ಪಂಜಾಬ್ ಸಾಫ್ ಪಾನಿ ಕಂಪೆನಿ ಪ್ರಕರಣಗಳಲ್ಲಿ ನಿಯಮಗಳನ್ನು ಮೀರಿ ಅವರ ಆಪ್ತರಿಗೆ ಗುತ್ತಿಗೆಗಳನ್ನು ನೀಡಿರುವುದಕ್ಕೆ ಸಂಬಂಧಿಸಿ ಅವರನ್ನು ಪ್ರಶ್ನಿಸಲಾಯಿತು. ಆದರೆ, ಅವರ ಉತ್ತರಗಳಿಂದ ತೃಪ್ತರಾಗದ ತನಿಖಾಧಿಕಾರಿಗಳು ಅವರನ್ನು ಬಂಧಿಸಿದರು’’ ಎಂದು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋದ ವಕ್ತಾರ ನವಾಝಿಶ್ ಅಲಿ ಆಸಿಮ್ ಪಿಟಿಐಗೆ ತಿಳಿಸಿದರು.

ಶಹಬಾಝ್‌ರನ್ನು ಶನಿವಾರ ಅಕೌಂಟಬಿಲಿಟಿ ನ್ಯಾಯಾಲಯದ ಸಮ್ಮುಖದಲ್ಲಿ ಹಾಜರುಪಡಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News