×
Ad

ನಯಾಗರ ಜಲಪಾತದಲ್ಲಿ ಈ ಬಾರಿ ದೀಪಾವಳಿ

Update: 2018-10-05 22:33 IST

ಟೊರಾಂಟೊ, ಅ. 5: ಈ ವರ್ಷ ಮೊದಲ ಬಾರಿಗೆ ಕೆನಡದ ನಯಾಗರ ಜಲಪಾತದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಗುವುದು.

ಇಂಡೋ-ಕೆನಡಿಯನ್ ಆರ್ಟ್ಸ್ ಕೌನ್ಸಿಲ್ (ಐಸಿಎಸಿ), ನಯಾಗರ ಪಾರ್ಕ್ಸ್ ಕಮಿಶನ್‌ನ ಬೆಂಬಲದೊಂದಿಗೆ ಜಗದ್ವಿಖ್ಯಾತ ಬೆಳಕಿನ ಹಬ್ಬವನ್ನು ಆಚರಿಸಲಿದೆ.

ಇದಕ್ಕೆ ಬೇಕಾದ ಅನುಮತಿಯನ್ನು ಐಸಿಎಸಿಯ ಸ್ಥಾಪಕ ನಿರ್ದೇಶಕ ಅಜಯ್ ಮೋದಿ ಪಡೆದಿದ್ದಾರೆ.

ಈ ವರ್ಷ ದೀಪಾವಳಿ ನವೆಂಬರ್ 7ರಂದು ಬರುತ್ತದೆ. ಆದರೆ, ನಯಾಗರ ಜಲಪಾತದಲ್ಲಿ ಅಕ್ಟೋಬರ್ 14ರಂದು ಅದನ್ನು ಆಚರಿಸಲಾಗುವುದು. ಇದಕ್ಕೆ ಕಾರಣವೇನೆಂದರೆ, ವಿಳಂಬವಾದಂತೆಲ್ಲ ಈ ಮಾದರಿಯ ಹೊರಾಂಗಣ ಕಾರ್ಯಕ್ರಮ ನಡೆಸಲು ವಾತಾವರಣ ಪೂರಕವಾಗಿರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News