ಸಿರಿಯ ಭದ್ರತಾ ಸಮನ್ವಯತೆ ಕುರಿತು ಚರ್ಚಿಸಲು ಪುಟಿನ್ ಭೇಟಿ ಮಾಡುವೆ: ಇಸ್ರೇಲ್ ಪ್ರಧಾನಿ

Update: 2018-10-07 15:53 GMT

ಜೆರುಸಲೇಂ,ಅ.7: ಇಸ್ರೇಲ್‌ನ ವಾಯು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ರಶ್ಯಾದ ಜೊತೆ ಉಂಟಾಗಿರುವ ವೈಮನಸ್ಸಿನ ಹಿನ್ನೆಲೆಯಲ್ಲಿ ಸಿರಿಯದ ಭದ್ರತಾ ಸಮನ್ವಯತೆ ಕುರಿತು ಚರ್ಚೆ ನಡೆಸಲು ಶೀಘ್ರದಲ್ಲಿ ರಶ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರನ್ನು ಭೇಟಿ ಮಾಡುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ತಿಳಿಸಿದ್ದಾರೆ.

ಈ ಕುರಿತು ನೆತನ್ಯಾಹು ರವಿವಾರ ನಡೆದ ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ. ಆದರೆ ಯಾವುದೇ ನಿರ್ದಿಷ್ಟ ದಿನವನ್ನು ನಿಗದಿ ಮಾಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ತಿಂಗಳು ಸಿರಿಯ ಪಡೆಗಳು ಇಸ್ರೇಲ್ ಜೆಟ್‌ಗಳನ್ನು ಹೊಡೆದುರುಳಿಸುವ ಆತುರದಲ್ಲಿ ರಶ್ಯಾದ ಗುಪ್ತಚರ ವಿಮಾನವನ್ನು ಸ್ಫೋಟಿಸಿತ್ತು, ಈ ಘಟನೆಗೆ ಇಸ್ರೇಲ್ ಪರೋಕ್ಷವಾಗಿ ಜವಾಬ್ದಾರಿಯಾಗಿದೆ ಎಂದು ರಶ್ಯಾ ಆರೋಪಿಸಿತ್ತು.

ಈ ಮಧ್ಯೆ ಸಿರಿಯದ ವಾಯು ಭದ್ರತೆಗೆ ತಾನು ಉನ್ನತೀಕರಿಸಿದ ಎಸ್.30 ಕ್ಷಿಪಣಿ ವ್ಯವಸ್ಥೆಯನ್ನು ಸೇರಿಸಿರುವುದಾಗಿ ರಶ್ಯಾ ತಿಳಿಸಿದೆ. ನೂತನ ವ್ಯವಸ್ಥೆಯನ್ನು ಇಸ್ರೇಲ್‌ನ ಸ್ಟೆಲ್ತ್ ಯುದ್ಧ ವಿಮಾನಗಳು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ತಾನು ಸಿರಿಯದಲ್ಲಿ ತನ್ನ ಕಡುವೈರಿ ಇರಾನ್‌ನ ಸೇನಾ ಪ್ರಭಾವವನ್ನು ತಡೆಯಲು ಕಟಿಬದ್ಧವಾಗಿರುವುದಾಗಿ ಇಸ್ರೇಲ್ ತಿಳಿಸಿದೆ. ರಶ್ಯಾದ ವಿಮಾನವನ್ನು ಹೊಡೆದುರುಳಿಸಿದ ನಂತರ ಸಿರಿಯದಲ್ಲಿ ಇಸ್ರೇಲ್ ಪಡೆಗಳು ದಾಳಿ ನಡೆಸಿದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News