ವ್ಯಾಪಾರ, ಸೇನಾ ಸಂಘರ್ಷ ಕಡಿಮೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ-ಚೀನಾ ಮಾತುಕತೆ

Update: 2018-10-07 16:20 GMT

ಬೀಜಿಂಗ್,ಅ.7: ಜಗತ್ತಿನ ಎರಡು ಅತೀದೊಡ್ಡ ಆರ್ಥಿಕತೆಗಳ ಮಧ್ಯೆ ತಲೆದೋರಿರುವ ವ್ಯಾಪಾರ ಮತ್ತು ಸೇನಾ ಸಂಘರ್ಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಮೆರಿಕ ಮತ್ತು ಚೀನಾ ಸೋಮವಾರ ಉನ್ನತ ವರ್ಗದ ಸಭೆಯನ್ನು ನಡೆಸಲು ನಿರ್ಧರಿಸಿದೆ.

ಎರಡೂ ದೇಶಗಳು ರಫ್ತುಗಳ ಮೇಲೆ ಹೆಚ್ಚುವರಿ ಬಿಲಿಯನ್ ಡಾಲರ್ ಸುಂಕ ಹೇರುವ ಮೂಲಕ ತಲೆದೋರಿರುವ ವ್ಯಾಪಾರ ಸಮರವನ್ನು ಕೊನೆಗೊಳಿಸುವ ದೃಷ್ಟಿಯಿಂದ ಅಮೆರಿಕದ ಕಾರ್ಯದರ್ಶಿ ಮೈಕ್ ಪೊಂಪಿಯೊ ಚೀನಾದ ನಾಯಕರು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಪೊಂಪಿಯೊ ಬೇಟಿಯನ್ನು ಖಚಿತಪಡಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವ ಚುನ್‌ಯಿಂಗ್, ಚೀನಾ ಮತ್ತು ಅಮೆರಿಕ ದ್ವಪಕ್ಷೀಯ ಸಂಬಂಧಗಳ ಬಗ್ಗೆ ಮತ್ತು ಸಾಮಾನ್ಯ ಕಾಳಜಿಯ ಅಂತರ್‌ರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಪೊಂಪಿಯೊ ಭೇಟಿಯಿಂದ ಎರಡು ದೇಶಗಳ ಮಧ್ಯೆ ಉಂಟಾಗಿರುವ ಉದ್ವಿಗ್ನತೆಯನ್ನು ಶಮನ ಮಾಡಲು ವೇದಿಕೆ ಸಿಗಲಿದೆ ಎಂದು ನಂಬಲಾಗಿದೆ. ಚೀನಾದಿಂದ ರಫ್ತಾಗುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕವನ್ನು ಹೇರುವ ಜೊತೆಗೆ ರಶ್ಯಾದಿಂದ ಎಸ್-400 ಕ್ಷಿಪಣಿ ಮತ್ತು ಸು-35 ಯುದ್ಧವಿಮಾನಗಳನ್ನು ಖರೀದಿಸಿರುವ ಕಾರಣಕ್ಕಾಗಿ ಅಮೆರಿಕ ಚೀನಾದ ಸೇನೆಯ ಮೇಲೆ ನಿರ್ಬಂಧವನ್ನು ಹೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News