ಉಗ್ರರಿಗೆ ಆರ್ಥಿಕ ನೆರವು ತಡೆಯುವ ಮಸೂದೆ ಅಂಗೀಕರಿಸಿದ ಇರಾನ್

Update: 2018-10-07 16:29 GMT

ಟೆಹ್ರಾನ್,ಅ.7: ಉಗ್ರರಿಗೆ ಆರ್ಥಿಕ ನೆರವನ್ನು ತಡೆಯುವ ಮಸೂದೆಯನ್ನು ರವಿವಾರ ಇರಾನ್ ಸಂಸತ್ ಅಂಗೀಕರಿಸಿದೆ. ಯೂರೋಪ್ ಮತ್ತು ಏಶ್ಯಾದ ದೇಶಗಳ ಜೊತೆ ಅಣು ಒಪ್ಪಂದವನ್ನು ಉಳಿಸಿಕೊಳ್ಳಲು ಈ ಕ್ರಮವನ್ನು ತೆಗೆದುಕೊಳ್ಳುವುದು ಇರಾನ್‌ಗೆ ಅನಿವಾರ್ಯವಾಗಿತ್ತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇರಾನನ್ನು ಆರ್ಥಿಕ ಕ್ರಿಯೆ ಕಾರ್ಯಪಡೆಯ ಕಪ್ಪುಪಟ್ಟಿಯಿಂದ ಹೊರತೆಗೆಯಲು ಅಧ್ಯಕ್ಷ ಹಸನ್ ರೂಹಾನಿ ಸೂಚಿಸಿದ ನಾಲ್ಕು ಮಸೂದೆಗಳಲ್ಲಿ ಉಗ್ರವಾದಕ್ಕೆ ಆರ್ಥಿಕ ನೆರವಿನ ವಿರುದ್ಧ ಹೋರಾಟ ಮಸೂದೆ ಒಂದಾಗಿದೆ. ಈ ಮಸೂದೆಯ ಅಂಗೀಕಾರದಿಂದ ನಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬುದನ್ನು ನಾವು ಖಚಿತಪಡಿಸುವುದಿಲ್ಲ. ಆದರೆ ಈ ಮಸೂದೆಯನ್ನು ಜಾರಿಗೆ ತರದಿದ್ದರೆ ಅಮೆರಿಕದಿಂದ ಮತ್ತಷ್ಟು ಕಿರುಕುಳಕ್ಕೆ ಒಳಗಾಗುವುದಂತೂ ಸ್ಪಷ್ಟ ಎಂದು ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಆರ್ಥಿಕ ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್)ಜಾಗತಿಕ ಹಣ ವಂಚನೆ ಮತ್ತು ಉಗ್ರರಿಗೆ ಆರ್ಥಿಕ ನೆರವಿನ ಮೇಲೆ ಕಣ್ಣಿಡುತ್ತದೆ.

ಸದ್ಯ ಇದರ ಕಪ್ಪುಪಟ್ಟಿಯಲ್ಲಿ ಇರಾನ್ ಮತ್ತು ಉತ್ತರ ಕೊರಿಯ ಇದೆ. ಈ ಪಟ್ಟಿಯಿಂದ ಹೊರಬರಲು ಉಗ್ರರ ಆರ್ಥಿಕ ನೆರವು ತಡೆಗೆ ಕಾಯ್ದೆಗೆ ರಚಿಸುವಂತೆ ಇರಾನ್‌ಗೆ ಎಫ್‌ಎಟಿಎಫ್ ಮೂರು ತಿಂಗಳ ಗಡುವು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News