ರಫೇಲ್‌ನಿಂದ ವಾಯಪಡೆಯ ಸಾಮರ್ಥ್ಯದಲ್ಲಿ ಸಶಕ್ತ ಬದಲಾವಣೆ : ಏ.ಮಾ. ನಂಬಿಯಾರ್

Update: 2018-10-07 17:27 GMT

ಶಿಲಾಂಗ್, ಅ.7: ರಫೇಲ್ ಯುದ್ಧವಿಮಾನ ಭಾರತೀಯ ವಾಯಪಡೆಗೆ ಆನೆಬಲವನ್ನು ತರುವುದಲ್ಲದೆ ವಾಯುಪಡೆಯ ಸಾಮರ್ಥ್ಯದಲ್ಲಿ ಗಮನಾರ್ಹ, ಸಶಕ್ತ ಬದಲಾವಣೆಗೆ ಕಾರಣವಾಗಲಿದೆ . ವಿಶ್ವದ ಈ ಭಾಗದಲ್ಲಿರುವ ರಾಷ್ಟ್ರಗಳು ಹೊಂದಿರುವ ಯುದ್ಧವಿಮಾನಗಳಿಗಿಂತ ಇದು ಆಧುನಿಕ ವಿಮಾನವಾಗಿದೆ ಎಂದು ಪೂರ್ವ ವಾಯುನೆಲೆಯ ಮುಖ್ಯಸ್ಥ ಏರ್ ಮಾರ್ಶಲ್ ಆರ್.ನಂಬಿಯಾರ್ ಹೇಳಿದ್ದಾರೆ.

ರಫೇಲ್ ಒಂದು ಅದ್ಭುತ ಯುದ್ಧವಿಮಾನವಾಗಿದೆ. ಎರಡು ವಾರದ ಹಿಂದೆ ಫ್ರಾನ್ಸ್‌ನಲ್ಲಿದ್ದಾಗ ಈ ವಿಮಾನವನ್ನು ಚಲಾಯಿಸುವ ಅವಕಾಶ ತನಗೆ ದೊರಕಿದೆ. ಅಧಿಕ ಸಾಮರ್ಥ್ಯದ ಈ ವಿಮಾನ ವಾಯುಪಡೆಯ ಸಾಮರ್ಥ್ಯದಲ್ಲಿ ಗಮನಾರ್ಹ ಬದಲಾವಣೆ ತರುವುದರಲ್ಲಿ ಸಂಶಯವಿಲ್ಲ ಎಂದರು. ಈ ಪ್ರದೇಶದಲ್ಲಿರುವ ಎಲ್ಲಾ ವಾಯುಪಡೆ ಘಟಕಗಳಿಗೆ ರಫೇಲ್ ಯುದ್ಧವಿಮಾನ , ಚಿನೂಕ್ ಮತ್ತು ಅಪಾಚೆ ಹೆಲಿಕಾಪ್ಟರ್‌ಗಳಂತಹ ಆಧುನಿಕ ಸೌಲಭ್ಯಗಳು ಲಭ್ಯವಾಗಲಿದೆ. ಅಸ್ಸಾಂ ಗಡಿಭಾಗದ ಸಮೀಪ, ಪಶ್ಚಿಮ ಬಂಗಾಳದ ಹಸೀಮರ ಎಂಬಲ್ಲಿ ರಫೇಲ್ ವಿಮಾನಗಳನ್ನು ನೆಲೆಗೊಳಿಸಲಾಗುವುದು ಎಂದವರು ತಿಳಿಸಿದ್ದಾರೆ.

ವಾಯುಪಡೆಯ ಸಾಮರ್ಥ್ಯ ವರ್ಧನೆಯ ಉದ್ದೇಶ ಚೀನಾ ಸೇರಿ ಇತರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡುವುದಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮರ್ಥ್ಯ ವರ್ಧನೆ ನಮ್ಮ ದೇಶಕ್ಕಾಗಿ ನಡೆಸುವ ಪ್ರಕ್ರಿಯೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News