ಏಶ್ಯನ್ ಪ್ಯಾರಾ ಗೇಮ್ಸ್ : ಸುಂದರ್ ಸಿಂಗ್ ಗುರ್ಜಾರ್‌ಗೆ ಬೆಳ್ಳಿ

Update: 2018-10-11 14:51 GMT

ಜಕಾರ್ತ, ಅ.11: ಭಾರತದ ಜಾವೆಲಿನ್ ಎಸೆತಗಾರ ಸುಂದರ್ ಸಿಂಗ್ ಗುರ್ಜಾರ್ ಅವರು ಏಶ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ಎಫ್ 46 ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದಾರೆ.

ಎರಡು ಬಾರಿ ಚಿನ್ನ ಜಯಿಸಿದ್ದ ದೇವೇಂದ್ರ ಝಝಾರಿಯ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಇದೇ ವಿಭಾಗದಲ್ಲಿ ಭಾರತದ ರಿಂಕು ಕಂಚು ಪಡೆದಿದ್ದಾರೆ.

  ಟಿ 13 ಪುರುಷರ 400 ಮೀಟರ್ ವಿಭಾಗದಲ್ಲಿ ಅವ್ನಿಲ್ ಕುಮಾರ್ ಕಂಚು ಗಿಟ್ಟಿಸಿಕೊಂಡಿದ್ದಾರೆ.

 ಜಾವೆಲಿನ್‌ನಲ್ಲಿ ಗುರ್ಜಾರ್ 5ನೇ ಯತ್ನದಲ್ಲಿ 61.33 ಮೀ ಸಾಧನೆಯೊಂದಿಗೆ ರಜತ ಪದಕವನ್ನು ತನ್ನದಾಗಿಸಿಕೊಂಡರು.

ಗೇಮ್ಸ್‌ಗೆ ಮೊದಲು ಗುರ್ಜಾರ್ ಭಾರತದ ಕ್ರೀಡಾ ಪ್ರಾಧಿಕಾರದ ನೆರವಿನಲ್ಲಿ ಫಿನ್ಲೆಂಡ್‌ನಲ್ಲಿ 22 ದಿನಗಳ ತರಬೇತಿ ಪಡೆದಿದ್ದರು.

 ರಿಂಕು 69.92 ಮೀ ಸಾಧನೆಯೊಂದಿಗೆ ಕಂಚು ಪಡೆದರು. ಇದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಶ್ರೀಲಂಕಾದ ದಿನೇಶ್ ಹೆರಾತ್ (61.84 ಮೀ ) ಏಶ್ಯನ್ ಗೇಮ್ಸ್‌ನಲ್ಲಿ ದಾಖಲೆ ಸಾಧನೆಯೊಂದಿಗೆ ಚಿನ್ನ ಪಡೆದರು. ಝಝಾರಿಯಾ ಕಳೆದ ಇಂಚೋನ್ ಪ್ಯಾರಾ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪಡೆದಿದ್ದರು.ಅವರು ನಿರಾಸೆ ಅನುಭವಿಸಿದರು.

 2017ರಲ್ಲಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಝಝಾರಿಯಾ 59.17 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರೂ ಪದಕ ಒಲಿಯಲಿಲ್ಲ.

 ಪುರುಷರ 100 ಮೀಟರ್ ಓಟದಲ್ಲಿ ಅವ್ನಿಲ್ 52 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಬಾಚಿಕೊಂಡರು. ಇರಾನ್‌ನ ಹಾಮಿದ್ ಝರಿಪ್ಪಸಾಯನ್ (51.41ಸೆ.) ಚಿನ್ನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News