ಧೋನಿ ದಾಖಲೆ ಹಿಂದಿಕ್ಕಿದ ಪಂತ್

Update: 2018-10-14 10:01 GMT

ಹೈದರಾಬಾದ್, ಅ.14: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದ ಭಾರತದ ವಿಕೆಟ್‌ಕೀಪರ್ ರಿಷಭ್ ಪಂತ್ ಈಗ ನಡೆಯುತ್ತಿರುವ ವೆಸ್ಟ್‌ಇಂಡೀಸ್ ವಿರುದ್ಧ ಸರಣಿಯಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ.

  ಪಂತ್ ವಿಂಡೀಸ್ ವಿರುದ್ಧ ಸರಣಿಯಲ್ಲಿ ಸತತ ಇನಿಂಗ್ಸ್‌ನಲ್ಲಿ ತಲಾ 92 ರನ್ ಗಳಿಸಿದ್ದಾರೆ. ಪಂತ್ ಎರಡು ಬಾರಿಯೂ 8 ರನ್‌ನಿಂದ ಶತಕ ವಂಚಿತರಾಗಿದ್ದರೂ ಮೊದಲ 5 ಟೆಸ್ಟ್ ಪಂದ್ಯಗಳಲ್ಲಿ 346 ರನ್ ಗಳಿಸಿದ್ದಾರೆ. ಈ ಮೂಲಕ ಮೊದಲ 5 ಟೆಸ್ಟ್‌ನಲ್ಲಿ 297 ರನ್ ಗಳಿಸಿದ್ದ ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎಂಎಸ್ ಧೋನಿ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.

 ಧೋನಿ ಮೊದಲ 5 ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ್ದ ಗಳಿಸಿದ್ದ 148 ರನ್ ಗರಿಷ್ಠ ಸ್ಕೋರಾಗಿತ್ತು. ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ 114 ರನ್ ಗಳಿಸಿದ್ದಾರೆ. ಎರಡು ಅರ್ಧಶತಕ ದಾಖಲಿಸಿದ್ದಾರೆ. ರಾಜ್‌ಕೋಟ್ ಹಾಗೂ ಹೈದರಾಬಾದ್ ಟೆಸ್ಟ್‌ನಲ್ಲಿ 92 ರನ್‌ಗೆ ಔಟಾಗದೇ ಇರುತ್ತಿದ್ದರೆ ಮೂರು ಶತಕ ಗಳಿಸಬಹುದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News