ಎರಡನೇ ಟೆಸ್ಟ್: ಭಾರತದ ಗೆಲುವಿಗೆ 72 ರನ್ ಗುರಿ

Update: 2018-10-14 10:58 GMT

 ಹೈದರಾಬಾದ್, ಅ.14: ವೇಗದ ಬೌಲರ್ ಉಮೇಶ್ ಯಾದವ್(4-45), ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ(3-12) ಹಾಗೂ ಆರ್.ಅಶ್ವಿನ್(2-24)ದಾಳಿಗೆ ತತ್ತರಿಸಿದ ವೆಸ್ಟ್‌ಇಂಡೀಸ್ ತಂಡ ಎರಡನೇ ಟೆಸ್ಟ್ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 127 ರನ್‌ಗೆ ಆಲೌಟಾಗಿದೆ. ಈ ಮೂಲಕ ಭಾರತದ ಗೆಲುವಿಗೆ 72 ರನ್ ಗುರಿ ನೀಡಿದೆ.

ಈಗಾಗಲೇ ಮೊದಲ ಪಂದ್ಯವನ್ನು ಜಯಿಸಿರುವ ಭಾರತ ಎರಡನೇ ಪಂದ್ಯವನ್ನೂ ಜಯಿಸಿ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 367 ರನ್‌ಗೆ ನಿಯಂತ್ರಿಸಿದ ವೆಸ್ಟ್‌ಇಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ ಅತ್ಯಂತ ಕಳಪೆ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ಬ್ರಾತ್‌ವೇಟ್(0) ಹಾಗೂ ಪೊವೆಲ್(0)ಖಾತೆ ತೆರೆಯಲು ವಿಫಲರಾದರು.

38 ರನ್ ಗಳಿಸಿದ ಅಂಬ್ರಿಸ್ ವಿಂಡೀಸ್ ಪರ ಗರಿಷ್ಠ ಸ್ಕೋರ್ ಗಳಿಸಿದರು. ಹೋಪ್(28), ಜೇಸನ್ ಹೋಲ್ಡರ್(19) ಹಾಗೂ ಹೆಟ್ಮೆಯರ್(17)ಎರಡಂಕೆಯ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News