ಟ್ರಕ್ ಕಾಲುವೆಗೆ ಬಿದ್ದು ಮಕ್ಕಳು ಸೇರಿ 19 ವಲಸಿಗರು ಮೃತ್ಯು

Update: 2018-10-14 17:07 GMT

ಇಸ್ತಾಂಬುಲ್,ಅ.14:ವಲಸಿಗರನ್ನು ಒಯ್ಯುತ್ತಿದ್ದ ಟ್ರಕ್ಕೊಂದು ಹೆದ್ದಾರಿಯಿಂದ ಜಾರಿ, ನೀರಿನ ಕಾಲುವೆಗೆ ಬಿದ್ದು, ಮಕ್ಕಳು ಸೇರಿದಂತೆ 19 ಮಂದಿ ಮೃತಪಟ್ಟ ಘಟನೆ ಪಶ್ಚಿಮ ಟರ್ಕಿಯಲ್ಲಿ ವರದಿಯಾಗಿದೆ.

ಈ ಟ್ರಕ್, ಇಝಿಮಿರ್ ಪ್ರಾಂತದ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ದುರಂತ ಸಂಭವಿಸಿದೆ. ಇಝಿಮಿರ್ ವಿಮಾನನಿಲ್ದಾಣದ ಸಮೀಪದ ಹೆದ್ದಾರಿಯಲ್ಲಿ ಟ್ರಕ್ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಅದು ಕಾಲುವೆಗೆ ಬಿದ್ದಿತೆಂದು ಸರಕಾರಿ ಸ್ವಾಮ್ಯದ ಅನಾಡೊಲು ಸುದ್ದಿಸಂಸ್ಥೆ ವರದಿ ಮಾಡಿದೆ.

ಆದಾಗ್ಯೂ, ದುರಂತದಲ್ಲಿ ಮೃತಪಟ್ಟ ವಲಸಿಗರ ರಾಷ್ಟ್ರೀಯತೆಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ಭಾರೀ ಸಂಖ್ಯೆಯ ರಕ್ಷಣಾ ಸಿಬ್ಬಂದಿಯನ್ನು ಕಳುಹಿಸಲಾಗಿದ್ದು, ಪರಿಹಾರ ಕಾರ್ಯಾಚರಣೆ ಭರದಿಂದ ನಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ.

ಮಧ್ಯಪ್ರಾಚ್ಯ,ಏಶ್ಯ ಹಾಗೂ ಆಫ್ರಿಕದ ಪ್ರಕ್ಷುಬ್ಧ ದೇಶಗಳಿಂದ ವಲಸಿಗರು ಯುರೋಪ್‌ಗೆ ವಲಸೆ ಹೋಗಲು ಟರ್ಕಿಯ ಮಾರ್ಗವನ್ನು ಬಳಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News