ಒಂದು ಸರ್ಜಿಕಲ್ ದಾಳಿ ನಡೆಸಿದಲ್ಲಿ 10 ಪ್ರತೀಕಾರ ದಾಳಿ: ಪಾಕ್

Update: 2018-10-14 17:30 GMT

ಇಸ್ಲಾಮಾಬಾದ್,ಅ.13: ಭಾರತವು ಒಂದೇ ಒಂದು ಸರ್ಜಿಕಲ್ ದಾಳಿಯನ್ನು ನಡೆಸಿದಲ್ಲಿ, ಅದಕ್ಕೆ ಪ್ರತೀಕಾರವಾಗಿ ಅಂತಹ ಹತ್ತು ದಾಳಿಗಳನ್ನು ನಡೆಸುವುದಾಗಿ ಪಾಕಿಸ್ತಾನವು ಶನಿವಾರ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದ ಸೇನೆಯ ಅಂತರ್ ಸೇವೆಗಳ ಸಾರ್ವಜನಿಕ ಸಂಪರ್ಕ ಇಲಾಖೆಯ ವಕ್ತಾರ ಮೇ.ಜ. ಆಸೀಫ್ ಗಫೂರ್ ಅವರು ಲಂಡನ್‌ನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಈ ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್ ಪ್ರವಾಸದಲ್ಲಿರುವ ಪಾಕ್ ಸೇನಾ ವರಿಷ್ಠ ಜ.ಖಮರ್ ಜಾವೇದ್ ಬಾವಾ ಅವರ ಜೊತೆ ಗಫೂರ್ ಲಂಡನ್‌ಗೆ ಆಗಮಿಸಿದ್ದರು. ‘‘ ಒಂದು ವೇಳೆ ಭಾರತವು ಪಾಕಿಸ್ತಾನದೊಳಗೆ ಸರ್ಜಿಕಲ್ ದಾಳಿ ನಡೆಸಲು ಧೈರ್ಯ ವಹಿಸಿದಲ್ಲಿ, ಅದಕ್ಕೆ ಉತ್ತರವಾಗಿ ಅದು ಹತ್ತು ಸರ್ಜಿಕಲ್ ದಾಳಿಗಳನ್ನು ಎದುರಿಸಬೇಕಾಗಬಹುದು’’ ಎಂಬುದಾಗಿ ಗಫೂರ್ ಹೇಳಿದ್ದಾರೆಂದು ರೇಡಿಯೋ ಪಾಕಿಸ್ತಾನ್ ವರದಿ ಮಾಡಿದೆ.

 ‘‘ನಮ್ಮ ವಿರುದ್ಧ ಯಾವುದೇ ದುಸ್ಸಾಹಸದ ಬಗ್ಗೆ ಯೋಚಿಸುವವರಿಗೆ, ಅವರ ಮನಸ್ಸಿನಲ್ಲಿ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಯಾವುದೇ ಸಂದೇಹ ಇರಬಾರದು’’ ಎಂದು ಗಫೂರ್ ಹೇಳಿದ್ದಾರೆ.50 ಶತಕೋಟಿ ಡಾಲರ್ ವೆಚ್ಚದ ಪಾಕ್-ಚೀನಾ ಆರ್ಥಿಕ ಕಾರಿಡಾರ್ ಯೋಜನೆಗೆ ಪಾಕ್ ಸೇನೆ ರಕ್ಷಕನಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯು ಪಾಕಿಸ್ತಾದ ಆರ್ಥಿತೆಯನ್ನು ಬಲಪಡಿಸಲಿದೆಯೆಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News