ನೇಪಾಳ: ಬಿರುಗಾಳಿಗೆ ಬಲಿಯಾದ 9 ಪರ್ವತಾರೋಹಿಗಳ ಶವ ಪತ್ತೆ

Update: 2018-10-14 17:31 GMT

 ಕಠ್ಮಂಡು,ಅ.14: ನೇಪಾಳದ ಗುರ್ಜಾ ಪರ್ವತದಲ್ಲಿ ಶನಿವಾರ ಬೀಸಿದ ಪ್ರಬಲ ಬಿರುಗಾಳಿಗೆ ಸಿಲುಕಿ ಮೃತಪಟ್ಟ 9 ಮಂದಿ ಪರ್ವತಾರೋಹಿಗಳ ಮೃತದೇಹಗಳನ್ನು ವಾಪಸ್‌ ತರುವ ಕಾರ್ಯವನ್ನು ರಕ್ಷಣಾ ತಂಡವೊಂದು ರವಿವಾರ ಆರಂಭಿಸಿದೆ.

 ಭೀಕರ ಬಿರುಗಾಳಿ ಹಾಗೂ ಹಿಮಪ್ರವಾಹಕ್ಕೆ ಸಿಲುಕಿಕೊಂಡ ದಕ್ಷಿಣ ಕೊರಿಯದ ಪರ್ವತಾರೋಹಿಗಳ ತಂಡದ ಶಿಬಿರದ ಬಳಿಕ ಇಂದು ಹೆಲಿಕಾಪ್ಟರ್ ಮೂಲಕ ನಾಲ್ವರು ಪರ್ವತರೋಹಣ ಮಾರ್ಗದರ್ಶಕರನ್ನು ಇಳಿಸಲಾಗಿದೆ. ಈ ಶಿಬಿರದಲ್ಲಿದ್ದ ಇಡೀ ತಂಡವು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದೆ. ಮೃತದೇಹಗಳು ಸುಮಾರು 500 ಮೀಟರ್ ದೂರದವರೆಗೂ ಚದುರಿಹೋಗಿರುವ ಸಾಧ್ಯತೆಯಿದೆಯೆಂದು ಶಂಕಿಸಲಾಗಿದೆ.

ಮೃತಪಟ್ಟ ಎಲ್ಲಾ 9 ಮಂದಿ ಪರ್ವತಾರೋಹಿಗಳ ಶವಗಳು ಪತ್ತೆಯಾಗಿದ್ದು, ಅವುಗಳನ್ನು ಹಿಂದೆ ತರುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು, ಈ ಕಾರ್ಯಾಚರಣೆಯ ಉಸ್ತುವಾರಿ ಹೊಂದಿರುವ ಹೆಲಿಕಾಪ್ಟರ್ ಪೈಲಟ್ ಸಿದ್ದಾರ್ಥ ಗುರುಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News