ಭಾರತ-ಬ್ರಿಟನ್ ಸಂಬಂಧದಲ್ಲಿ ‘ಕೊಂಚ ಅಪನಂಬಿಕೆ’: ಭಾರತೀಯ ರಾಯಭಾರಿ ವೈ. ಕೆ. ಸಿನ್ಹಾ

Update: 2018-10-22 15:37 GMT

ಲಂಡನ್, ಅ. 22: ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧದಲ್ಲಿ ‘ಕೊಂಚ ಅಪನಂಬಿಕೆ’ಯಿದೆ ಎಂದು ಬ್ರಿಟನ್‌ಗೆ ಭಾರತೀಯ ಹೈಕಮಿಶನರ್ ವೈ.ಕೆ. ಸಿನ್ಹಾ ಹೇಳಿದ್ದಾರೆ.

ದಕ್ಷಿಣ ಏಶ್ಯದ ಭಯೋತ್ಪಾದನೆಗೆ ಸಂಬಂಧಿಸಿ ಲಂಡನ್‌ನ ದೃಷ್ಟಿಕೋನದಲ್ಲಿ ಸ್ವಲ್ಪ ಸಮಸ್ಯೆಯಿದೆ, ಆದರೆ, ಒಟ್ಟಾರೆಯಾಗಿ ಉಭಯ ದೇಶಗಳ ನಡುವೆ ಆಧುನಿಕ ಭಾಗೀದಾರಿಕೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್ ಭಯೋತ್ಪಾದನೆಯಿಂದ ಬಳಲಿದೆ, ಹಾಗಾಗಿ, ಭಾರತದ ನೆರೆಕರೆಯಿಂದ ಹೊಮ್ಮುತ್ತಿರುವ ಭಯೋತ್ಪಾದನೆಯ ಕುರಿತ ತನ್ನ ನಿಲುವನ್ನು ಅದು ಮರುಪರಿಶೀಲಿಸಬೇಕು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದರು.

ಸಿನ್ಹಾ ಭಾರತೀಯ ವಿದೇಶ ಸೇವೆಯಲ್ಲಿ 37 ವರ್ಷಗಳ ಸೇವೆ ಸಲ್ಲಿಸಿದ ಬಳಿಕ ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ.

ಭಾರತ-ಬ್ರಿಟನ್ ಸಂಬಂಧವು ಇತ್ತೀಚಿನ ದಿನಗಳಲ್ಲಿ ‘ವಿಶ್ವಾಸ ಕೊರತೆ’ಯಿಂದ ಬಳಲುತ್ತಿದೆ ಎಂಬುದಾಗಿ ಇತ್ತೀಚೆಗೆ ಭಾರತಕ್ಕೆ ಬ್ರಿಟನ್‌ನ ಮಾಜಿ ಹೈಕಮಿಶನರ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

‘‘ನಾನು ಅಷ್ಟು ದೂರ ಹೋಗುವುದಿಲ್ಲ’’ ಎಂದು ಹೇಳಿದ ಸಿನ್ಹಾ, ಆದಾಗ್ಯೂ, ಕೊಂಚ ವಿಶ್ವಾಸ ಕೊರತೆಯಿಂದೆ ಎನ್ನುವುದನ್ನು ಒಪ್ಪಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News