ಡಬ್ಲೂಟಿಎ ಎಲೈಟ್ ಪ್ರಶಸ್ತಿ ಬಾಚಿಕೊಂಡ ಆ್ಯಶ್ಲೆ ಬಾರ್ಟಿ
Update: 2018-11-04 23:47 IST
ಹಾಂಕಾಂಗ್,ನ.4: ಇಲ್ಲಿ ನಡೆದ ಡಬ್ಲೂಟಿಎ ಎಲೈಟ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯದ ಆ್ಯಶ್ಲೆ ಬಾರ್ಟಿ ಅವರು ಚೀನಾದ ವಾಂಗ್ ಕಿಯಾಂಗ್‌ರನ್ನು 6-3, 6-4 ಸೆಟ್‌ಗಳಿಂದ ಮಣಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. 22ರ ಹರೆಯದ ಬಾರ್ಟಿ ಸೆಮಿ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಗ್ರ ಶ್ರೆಯಾಂಕಿತೆ ಜರ್ಮನಿಯ ಜೂಲಿಯ ಜೋರ್ಜಸ್‌ರನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದರು. ಇದು ಬಾರ್ಟಿಯ ಮೂರನೇ ಡಬ್ಲೂಟಿಎ ಪ್ರಶಸ್ತಿಯಾಗಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯನ್ ಟೆನಿಸ್ ತಾರೆ ಈ ವರ್ಷದ ಆರಂಭದಲ್ಲಿ ನಾಟಿಂಗ್‌ಹ್ಯಾಮ್ ಓಪನ್ ಮತ್ತು 2017ರಲ್ಲಿ ಮಲೇಶ್ಯನ್ ಓಪನ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಕ್ರಿಕೆಟ್ ಆಡುವ ಸಲುವಾಗಿ ಟೆನಿಸ್‌ಗೆ ಸ್ವಲ್ಪ ಕಾಲ ವಿರಾಮ ನೀಡಿದ್ದ ಬಾರ್ಟಿ ಟೆನಿಸ್‌ಗೆ ಮರಳಿದಾಗ ತಮ್ಮ ಆಟವನ್ನು ಮತ್ತಷ್ಟು ಉತ್ತಮಗೊಳಿಸಿದ್ದರು. ಆ ಮೂಲಕ ವರ್ಷದ ಆರಂಭದಲ್ಲೇ ಪ್ರಶಸ್ತಿ ಗೆದ್ದು ವಿಶ್ವ ಅಂಕಪಟ್ಟಿಯಲ್ಲಿ 20ನೇ ಸ್ಥಾನಕ್ಕೆ ಜಿಗಿದಿದ್ದರು.