ದಕ್ಷಿಣ ಆಫ್ರಿಕ ತಂಡಕ್ಕೆ ಆರು ವಿಕೆಟ್‌ಗಳ ಜಯ
ಪರ್ತ್, ನ.4: ಆಸ್ಟ್ರೇಲಿಯ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕ 6 ವಿಕೆಟ್‌ಗಳ ಜಯ ಗಳಿಸಿದೆ. ಪರ್ತ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 153 ರನ್‌ಗಳ ಸವಾಲನ್ನು ಪಡೆದ ಆಫ್ರಿಕ ತಂಡ 29.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
ಆರಂಭಿಕ ದಾಂಡಿಗ ಕ್ವಿಂಟನ್ ಡಿ ಕಾಕ್ 47 ರನ್, ರೀಝಾ ಹೆಂಡ್ರಿಕ್ 44 ರನ್, ಏಡೆನ್ ಮಕ್ರಮ್ 36 ರನ್, ನಾಯಕ ಎಫ್ ಡು ಪ್ಲೆಸಿಸ್ ಔಟಾಗದೆ 10 ರನ್, ಡೇವಿಡ್ ಮಿಲ್ಲರ್ ಔಟಾಗದೆ 2 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆತಿಥೇಯ ಆಸ್ಟ್ರೇಲಿಯ ತಂಡ 38.1 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟಾಗಿತ್ತು.
ಆಫ್ರಿಕದ ಫೆಹ್ಲುಕ್ವಾಯೊ (33ಕ್ಕೆ 3), ಇಮ್ರಾನ್ ತಾಹಿರ್(39ಕ್ಕೆ 2), ಡೇಲ್ ಸ್ಟೇಯ್ನೆ (18ಕ್ಕೆ 2), ಲುಂಗಿ ಎಂಗಿಡಿ (26ಕ್ಕೆ 2), ದಾಳಿಗೆ ಸಿಲುಕಿ ಆಸ್ಟ್ರೇಲಿಯ ಬೇಗನೇ ಇನಿಂಗ್ಸ್ ಮುಗಿಸಿತ್ತು.
16.2 ಓವರ್‌ಗಳಲ್ಲಿ 36 ರನ್ ಗಳಿಸುವಷ್ಟರಲ್ಲಿ ಆಸ್ಟ್ರೇಲಿಯ 4 ವಿಕೆಟ್ ಕಳೆದುಕೊಂಡಿತ್ತು. ಟ್ರಾವಿಸ್ ಹೆಡ್(1), ಡಿ ಅರ್ಕಿ ಶಾರ್ಟ್ (0) ಅವರನ್ನು ಸ್ಟೇಯ್ನಾ ಪೆವಿಲಿಯನ್‌ಗೆ ಅಟ್ಟಿದರು. ನಾಯಕ ಆ್ಯರೊನ್ ಫಿಂಚ್ 15 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಎಂಗಿಡಿ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಕ್ರಿಸ್ ಲಿನ್ 15 ರನ್ ಗಳಿಸಿ ಔಟಾದರು.
ಅಲೆಕ್ಸ್ ಕ್ಯಾರೇ (33) ಮತ್ತು ನಥನ್ ಕೌಲ್ಟರ್ ನೀಲ್ (34) 30ಕ್ಕಿಂತ ಅಧಿಕ ರನ್ ದಾಖಲಿಸಿ ತಂಡದ ಸ್ಕೋರ್‌ನ್ನು 150ರ ಗಡಿ ದಾಟಲು ನೆರವಾದರು. ಗ್ಲೆನ್ ಮ್ಯಾಕ್ಸ್‌ವೆಲ್ 11ರನ್, ಮಾರ್ಕಸ್ ಸ್ಟೋನಿಸ್ 14ರನ್, ಪ್ಯಾಟ್ ಕಮಿನ್ಸ್ 12ರನ್,ಮಿಚೆಲ್ ಸ್ಟಾರ್ಕ್ 12 ರನ್ ಮತ್ತು ಹೇಝಲ್‌ವುಡ್ ಔಟಾಗದೆ 6 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
►ಆಸ್ಟ್ರೇಲಿಯ 38.1 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ (ಕೌಲ್ಟರ್ ನೀಲ್ 34, ಅಲೆಕ್ಸ್ 33; ಫೆಹ್ಲುಕ್ವಾಯೊ 33ಕ್ಕೆ 3).
►ದಕ್ಷಿಣ ಆಫ್ರಿಕ 29.2 ಓವರ್‌ಗಳಲ್ಲಿ 153/4(ಕ್ವಿಂಟನ್ ಡಿ ಕಾಕ್ 47, ಹೆಂಡ್ರಿಕ್ಸ್ 44; ಸ್ಟೋನಿಸ್ 16ಕ್ಕೆ 3).