ವಿರಾಟ್ ಕೊಹ್ಲಿಯ ಆ್ಯಪ್ ಬಿಡುಗಡೆ

Update: 2018-11-05 18:40 GMT

ಹೊಸದಿಲ್ಲಿ, ನ.5: ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ಸರಣಿಯಿಂದ ದೂರ ಉಳಿದಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಮವಾರ ತನ್ನ 30ನೇ ಹುಟ್ಟು ಹಬ್ಬದ ಅಂಗವಾಗಿ ಅಧಿಕೃತ ಆ್ಯಪ್‌ನ್ನು ಬಿಡುಗಡೆಗೊಳಿಸಿದರು.

ಇದರಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್‌ನಲ್ಲಿ ಮಾಡಿರುವ ಸಾಧನೆಯ ಸಂಪೂರ್ಣ ವಿವರಗಳಿವೆ.

‘ವಿರಾಟ್ ಕೊಹ್ಲಿ ಅಫಿಷಿಯಲ್ ಆ್ಯಪ್’ನ್ನು ಅಂಡ್ರಾಯ್ಡಾ ಮೊಬೈಲ್‌ನಲ್ಲಿ ಆ್ಯಪಲ್ ಐಒಎಸ್ ಮತ್ತು ಗೂಗಲ್ ಪ್ಲೇ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಜಾಗತಿಕ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ವಿರಾಟ್ ಕೊಹ್ಲಿ ಅವರಿಗೆ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News