ಸನ್‌ರೈಸರ್ಸ್‌ನಿಂದ ಡೆಲ್ಲಿ ತಂಡಕ್ಕೆ ಸೇರ್ಪಡೆಯಾದ ಧವನ್
ಹೊಸದಿಲ್ಲಿ, ನ.5: ಸನ್‌ರೈಸರ್ಸ್ ಹೈದರಾಬಾದ್ ತಂಡ ಶಿಖರ್ ಧವನ್‌ರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಬಿಟ್ಟುಕೊಡಲು ನಿರ್ಧರಿಸಿದೆ. ಈ ಹೆಜ್ಜೆಯಿಂದಾಗಿ ಭಾರತದ ಆರಂಭಿಕ ಆಟಗಾರ ಧವನ್ ಸುಮಾರು 10 ವರ್ಷಗಳ ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ವಾಪಸಾಗಲಿದ್ದಾರೆ.
ಧವನ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಡೆಲ್ಲಿ ತಂಡ ಆಲ್‌ರೌಂಡರ್ ವಿಜಯ್ ಶಂಕರ್, ಸ್ಪಿನ್ನರ್ ಶಾಬಾಝ್ ನದೀಮ್ ಹಾಗೂ ಯುವ ಆಟಗಾರ ಅಭಿಷೇಕ್ ಶರ್ಮಾರನ್ನು ಬಿಡುಗಡೆಗೊಳಿಸಿದೆ.
ಈ ವರ್ಷಾರಂಭದಲ್ಲಿ ನಡೆದ ಹರಾಜಿನಲ್ಲಿ ಸನ್‌ರೈಸರ್ಸ್ ತಂಡ ರೈಟ್ ಟು ಮ್ಯಾಚ್ ಕಾರ್ಡ್‌ನ ಮೂಲಕ 5.2 ಕೋ.ರೂ. ನೀಡಿ ಧವನ್‌ರನ್ನು ವಾಪಸ್ ಕರೆಸಿಕೊಂಡಿತ್ತು. ಎಡಗೈ ದಾಂಡಿಗ ತನಗೆ ನೀಡಿರುವ ಮೊತ್ತಕ್ಕೆ ಅಸಮಾಧಾನಗೊಂಡಿದ್ದರು. ಹೀಗಾಗಿ 2008ರ ಚೊಚ್ಚಲ ಐಪಿಎಲ್‌ನಲ್ಲಿ ಆಡಿದ್ದ ದಿಲ್ಲಿ ತಂಡಕ್ಕೆ ವಾಪಸಾಗಿದ್ದಾರೆ.
ಧವನ್ 2013ರಿಂದ ಸನ್‌ರೈಸರ್ಸ್ ತಂಡದಲ್ಲಿ ಆಡುತ್ತಿದ್ದಾರೆ. 91 ಇನಿಂಗ್ಸ್‌ಗಳಲ್ಲಿ 2,768 ರನ್ ಗಳಿಸುವುದರೊಂದಿಗೆ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು.