ಬೇರೆ ದೇಶದ ಬ್ಯಾಟ್ಸ್ ಮ್ಯಾನ್ ಗಳನ್ನು ಇಷ್ಟಪಡುವುದಾದರೆ ಭಾರತದಲ್ಲಿ ಇರಬೇಡಿ

Update: 2018-11-07 10:21 GMT

ಹೊಸದಿಲ್ಲಿ, ನ.7: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯನ್ ಬ್ಯಾಟ್ಸ್ ಮ್ಯಾನ್ ಗಳಿಗೆ ಆದ್ಯತೆ ನೀಡುವವರು ಭಾರತದಲ್ಲಿ ವಾಸಿಸಬಾರದು ಎಂಬ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ಹೇಳಿಕೆ ವಿವಾದ ಸೃಷ್ಟಿಸಿದೆ.

ತನ್ನ ಅಫಿಶಿಯಲ್ ಆ್ಯಪ್ ಗಾಗಿ ಸೆಶನ್ ಒಂದನ್ನು ರೆಕಾರ್ಡ್ ಮಾಡುತ್ತಿದ್ದಾಗ ಒಬ್ಬರ ಕಾಮೆಂಟ್ ಓದಿದ್ದಾರೆ. “ನನಗೆ ಅವರ (ಕೊಹ್ಲಿ) ಬ್ಯಾಟಿಂಗ್ ನಲ್ಲಿ ವಿಶೇಷವೇನೂ ಕಂಡಿಲ್ಲ. ನಾನು ಭಾರತೀಯರಿಗಿಂತ ಇಂಗ್ಲಿಷ್ ಮತ್ತು ಆಸ್ಟ್ರೇಲಿಯನ್ ಬ್ಯಾಟ್ಸ್ ಮ್ಯಾನ್ ಗಳನ್ನು ಇಷ್ಟಪಡುತ್ತೇನೆ” ಎಂಬ ಕಾಮೆಂಟನ್ನು ಕೊಹ್ಲಿ ಓದಿದ್ದಾರೆ. ನಂತರ ಇದಕ್ಕೆ ಪ್ರತಿಕ್ರಿಯಿಸಿದ ಭಾರತ ತಂಡದ ನಾಯಕ, “ಓಕೆ. ನೀವು ಭಾರತದಲ್ಲಿ ವಾಸಿಸಬಾರದು ಎಂದು ನಾನು ಭಾವಿಸುತ್ತೇನೆ… ನೀವು ಬೇರೆಡೆಗೆ ಹೋಗಿ ಜೀವಿಸಬೇಕು. ನೀವು ನಮ್ಮ ದೇಶದಲ್ಲಿ ಜೀವಿಸುತ್ತಾ ಇನ್ನೊಂದು ದೇಶವನ್ನು ಇಷ್ಟಪಡುವುದೇಕೆ?, ನೀವು ನನ್ನನ್ನು ಇಷ್ಟಪಡುವುದಿಲ್ಲ ಎಂದದ್ದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಆದರೆ ನೀವು ನಮ್ಮ ದೇಶದಲ್ಲಿ ಇರಬೇಕು ಎಂದು ನಾನು ಯೋಚಿಸುವುದಿಲ್ಲ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರ್ ಬಳಕೆದಾರರು, “ತಮ್ಮ ದೇಶವನ್ನು ಬಿಟ್ಟು ಭಾರತಕ್ಕೆ ಬರುವಂತೆ ಕೊಹ್ಲಿ ತಮ್ಮ ವಿದೇಶಿ ಅಭಿಮಾನಿಗಳಿಗೆ ಹೇಳುತ್ತಿದ್ದಾರೆಯೇ?” ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News