ವಿಶ್ವಸಂಸ್ಥೆಯಲ್ಲಿ ಸುಧಾರಣೆಯಾಗದಿದ್ದರೆ ಶಾಂತಿ ಮರೀಚಿಕೆ: ಭಾರತ

Update: 2018-11-10 16:58 GMT

ನ್ಯೂಯಾರ್ಕ್, ನ. 10: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಯಾಗಬೇಕು ಹಾಗೂ ಅದಕ್ಕೆ ನವಚೇತನ ಹರಿಯಬೇಕು ಎಂಬುದಾಗಿ ವಿಶ್ವಸಂಸ್ಥೆಗೆ ಭಾರತದ ರಾಯಭಾರಿ ಸೈಯದ್ ಅಕ್ಬರುದ್ದೀನ್ ಶುಕ್ರವಾರ ಕರೆ ನೀಡಿದ್ದಾರೆ.

ಭದ್ರತಾ ಮಂಡಳಿಯಲ್ಲಿ ಸುಧಾರಣೆಯಾಗದಿದ್ದರೆ, ನವೀಕರಣವಾಗದಿದ್ದರೆ ಹಾಗೂ ಬಹುಪಕ್ಷೀಯ ವ್ಯವಸ್ಥೆ ಇಲ್ಲದಿದ್ದರೆ, ಜಾಗತಿಕ ಶಾಂತಿಯ ಸ್ಥಾನವನ್ನು ವಿಚ್ಛಿದ್ರಕಾರಿ ಜಾಗತಿಕ ವ್ಯವಸ್ಥೆಯು ಆಕ್ರಮಿಸಿಕೊಳ್ಳುವುದು ಎಂದು ಭದ್ರತಾ ಮಂಡಳಿಯಲ್ಲಿ ಶುಕ್ರವಾರ ನಡೆದ ಮುಕ್ತ ಸಂವಾದದಲ್ಲಿ ಮಾತನಾಡಿದ ಅಕ್ಬರುದ್ದೀನ್ ಹೇಳಿದರು.

ಭದ್ರತಾ ಮಂಡಳಿಯು ನಿರ್ವಹಣೆ, ವಿಶ್ವಾಸಾರ್ಹತೆ, ಕಾನೂನುಬದ್ಧತೆ ಮತ್ತು ಪ್ರಸ್ತುತತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಅವರು ಬೆಟ್ಟು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News