ಸಾಮಾಜಿಕ ಮಾಧ್ಯಮದ ಅತಿ ಬಳಕೆಯಿಂದ ಈ ಗಂಭೀರ ಸಮಸ್ಯೆಗಳು ಕಾಡಬಹುದು

Update: 2018-11-10 17:12 GMT

ನ್ಯೂಯಾರ್ಕ್, ನ. 10: ಫೇಸ್‌ ಬುಕ್, ಸ್ನಾಪ್‌ ಚಾಟ್ ಮತ್ತು ಇನ್‌ ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಮಾಧ್ಯಮಗಳ ಅತಿ ಬಳಕೆಯು ಖಿನ್ನತೆ ಮತ್ತು ಏಕಾಂಗಿತನಕ್ಕೆ ಕಾರಣವಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಈ ಆ್ಯಪ್‌ಗಳ ಸೀಮಿತ ಬಳಕೆಯು ವ್ಯಕ್ತಿಯ ನೆಮ್ಮದಿಯನ್ನು ಹೆಚ್ಚಿಸಬಹುದು ಎಂದು ‘ಜರ್ನಲ್ ಆಫ್ ಸೋಶಿಯಲ್ ಆ್ಯಂಡ್ ಕ್ಲಿನಿಕಲ್ ಸೈಕಾಲಜಿ’ಯಲ್ಲಿ ಪ್ರಕಟಗೊಂಡ ಅಧ್ಯಯನ ತಿಳಿಸಿದೆ.

‘‘ಸಾಮಾಜಿಕ ಮಾಧ್ಯಮಗಳಲ್ಲಿ ನಾವು ವ್ಯಸ್ತರಾಗದಿದ್ದಾಗ, ನಮ್ಮ ಬದುಕಿನ ಬಗ್ಗೆ ಉತ್ತಮ ಭಾವನೆಯನ್ನು ನಮ್ಮಲ್ಲಿ ಬೆಳೆಸುವ ವಿಷಯಗಳಲ್ಲಿ ನಾವು ಹೆಚ್ಚಿನ ಸಮಯವನ್ನು ಕಳೆಯುತ್ತೇವೆ’’ ಎಂದು ಅಮೆರಿಕದ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಮೆಲಿಸಾ ಹಂಟ್ ಹೇಳುತ್ತಾರೆ.

ಅಧ್ಯಯನಕ್ಕಾಗಿ ವಿಶ್ವವಿದ್ಯಾನಿಲಯದ ಸಂಶೋಧಕರು 143 ಪದವಿ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News