ಬ್ಯಾಟಿಂಗ್ ಆರಂಭಿಸುವ ಮೊದಲೇ ಭಾರತಕ್ಕೆ 10 ರನ್

Update: 2018-11-12 17:21 GMT

ಪ್ರಾವಿಡೆನ್ಸ್ಸ್(ಗಯಾನ), ನ.12: ವನಿತೆಯರ ಟ್ವೆಂಟಿ -20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ರವಿವಾರ ರಾತ್ರಿ ಭಾರತದ ವನಿತೆಯರ ಕ್ರಿಕೆಟ್ ತಂಡ ಬ್ಯಾಟಿಂಗ್ ಆರಂಭಿಸುವ ಮೊದಲೇ 10 ರನ್‌ಗಳನ್ನು ಪಡೆದಿತ್ತು.

ಪಾಕಿಸ್ತಾನ ಆಟಾಗಾರ್ತಿಯರು ಅಶಿಸ್ತಿನ ಆಟಕ್ಕಾಗಿ ಎರಡು ಬಾರಿ ಭಾರತಕ್ಕೆ ತಲಾ 5 ರನ್‌ಗಳನ್ನು ದಂಡದ ರೂಪದಲ್ಲಿ ಬಿಟ್ಟುಕೊಡಬೇಕಾಯಿತು.

ಪಾಕಿಸ್ತಾನದ ಇಬ್ಬರು ಆಟಗಾರ್ತಿಯರು ರನ್ ಕದಿಯುವ ವೇಳೆ ಪಿಚ್‌ನ ಅಪಾಯಕಾರಿ ವಲಯದಲ್ಲಿ ಓಡಿದ್ದರು. ಇದರಿಂದಾಗಿ ಓಡಿದ ಎರಡು ರನ್‌ಗಳು. ತಂಡದ ಖಾತೆಗೆ ಸೇರ್ಪಡೆಗೊಳ್ಳಲಿಲ್ಲ. ಅಷ್ಟು ಮಾತ್ರವಲ್ಲ ಭಾರತಕ್ಕೆ ಬೋನಸ್ ರೂಪದಲ್ಲಿ 2 ಬಾರಿ ತಲಾ 5ರನ್‌ನಂತೆ 10 ರನ್‌ಗಳು ಸಿಕ್ಕಿತು.

ಒಂದು ವೇಳೆ 2 ರನ್‌ಗಳು ಸಿಗುತ್ತಿದ್ದರೆ ಪಾಕಿಸ್ತಾನದ ಮೊತ್ತ 135ಕ್ಕೆ ತಲುಪುವ ಸಾಧ್ಯತೆ ಇತ್ತು. ಪಾಕಿಸ್ತಾನಕ್ಕೆ ಓಡಿದ 2 ರನ್‌ಗಳು ಸಿಗಲಿಲ್ಲ. ಈ ಕಾರಣದಿಂದಾಗಿ ಭಾರತದ ಪಾಲಿಗೆ ಒಟ್ಟು 12 ರನ್‌ಗಳು ಸುಲಭವಾಗಿ ಸಿಕ್ಕಿತು.

ಸಂಕ್ಷಿಪ್ತ ಸ್ಕೋರ್

 ಭಾರತ 19 ಓವರ್‌ಗಳಲ್ಲಿ 137/3(ಮಿಥಾಲಿ ರಾಜ್ 56, ಮಂಧಾನ 26; ಡಿ.ಬೇಗ್ 19ಕ್ಕೆ1).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News