ಐಸಿಸಿ ರ‍್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ಕೊಹ್ಲಿ, ಬುಮ್ರಾ

Update: 2018-11-13 18:12 GMT

ದುಬೈ, ನ.13: ಭಾರತ ನಾಯಕ ವಿರಾಟ್ ಕೊಹ್ಲಿ ಹಾಗೂ ಪ್ರಮುಖ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ಏಕದಿನ ರ‍್ಯಾಂಕಿಂಗ್ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ದಾಂಡಿಗರ ರ‍್ಯಾಂಕಿಂಗ್ನಲ್ಲಿ ಕೊಹ್ಲಿ 899 ಅಂಕ ಗಳಿಸುವ ಮೂಲಕ ನಂ.1 ಸ್ಥಾನ ಉಳಿಸಿಕೊಂಡರು. ಸೀಮಿತ ಓವರ್ ಕ್ರಿಕೆಟ್ ತಂಡದ ಉಪ ನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.

ರೋಹಿತ್‌ರ ಆರಂಭಿಕ ಜೊತೆಗಾರ ಶಿಖರ್ ಧವನ್ 8ನೇ ಸ್ಥಾನದಲ್ಲಿದ್ದಾರೆ. 9ನೇ ಸ್ಥಾನದಲ್ಲಿದ್ದ ಧವನ್ ಒಂದು ಸ್ಥಾನ ಪ್ರಗತಿ ಸಾಧಿಸಿದ್ದಾರೆ. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 20ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ರ‍್ಯಾಂಕಿಂಗ್ನಲ್ಲಿ ಭಾರತದ ಬುಮ್ರಾ(841 ಅಂಕ)ಅಗ್ರ ಸ್ಥಾನದಲ್ಲಿದ್ದರೆ.ಸ್ಪಿನ್ನರ್ ಕುಲ್‌ದೀಪ್ ಯಾದವ್ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇನ್ನೋರ್ವ ಸ್ಪಿನ್ನರ್ ಯಜುವೇಂದ್ರ ಚಹಾಲ್ 5ನೇ ಸ್ಥಾನದಲ್ಲಿದ್ದಾರೆ.

ಅಫ್ಘಾನಿಸ್ತಾನದ ರಶೀದ್ ಖಾನ್ (353 ಅಂಕ)ವಿಶ್ವದ ಕ್ರಿಕೆಟ್‌ನ ಅಗ್ರಮಾನ್ಯ ಆಲ್‌ರೌಂಡರ್ ಎನಿಸಿಕೊಂಡಿದ್ದಾರೆ.

ಟೀಮ್ ರ‍್ಯಾಂಕಿಂಗ್ನಲ್ಲಿ ಭಾರತ 121 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಇಂಗ್ಲೆಂಡ್(126 ಅಂಕ)ಮೊದಲ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News