ಹಿಮಾದಾಸ್ ಯುನಿಸೆಫ್‌ನ ಯುವ ರಾಯಭಾರಿಯಾಗಿ ನೇಮಕ

Update: 2018-11-14 17:21 GMT

ಹೊಸದಿಲ್ಲಿ, ನ.14: ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ಭಾರತದ ಓಟಗಾರ್ತಿ ಹಿಮಾದಾಸ್ ಯುನಿಸೆಫ್‌ನ ಯುವ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

   ಜಾಗತಿಕ ಮಕ್ಕಳ ದಿನಾಚರಣೆಯ ಅಂಗವಾಗಿ ಹಿಮಾದಾಸ್‌ರನ್ನು ಯುನಿಸೆಫ್‌ನ ಯುವ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಭಾರತದಿಂದ ಮೊದಲ ಬಾರಿ ಯೂತ್ ಅಂಬಾಸಡರ್ ಆಗಿ ನೇಮಕಗೊಳ್ಳುವ ಮೂಲಕ ಹಿಮಾದಾಸ್ ದಾಖಲೆ ನಿರ್ಮಿಸಿದ್ದಾರೆ.

ಹಿಮಾದಾಸ್ ಐಎಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, 2018ರ ಏಶ್ಯನ್ ಗೇಮ್ಸ್‌ನ ಮಹಿಳೆಯರ 4x400 ರಿಲೇಯಲ್ಲಿ ಚಿನ್ನ ಜಯಿಸಿದ್ದರು ಮತ್ತು 400 ಮೀಟರ್ ಓಟದಲ್ಲಿ ಬೆಳ್ಳಿ  ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News