ಭಯೋತ್ಪಾದನೆ ವಿರುದ್ಧ ಪಾಕ್ ಹೆಚ್ಚಿನದನ್ನು ಮಾಡಬೇಕು: ಅಮೆರಿಕ

Update: 2018-11-15 17:11 GMT

ವಾಶಿಂಗ್ಟನ್, ನ. 15: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

9/11 ದಾಳಿಯ ಬಳಿಕ ಅಲ್-ಖಾಯಿದ ವಿರುದ್ಧ ನಡೆಸಿದ ಕಾರ್ಯಾಚರಣೆಯ ಮಾದರಿಯಲ್ಲೇ ಹಕ್ಕಾನಿ ನೆಟ್‌ವರ್ಕ್ ಮತ್ತು ಲಷ್ಕರೆ ತಯ್ಯಿಬ ಮುಂತಾದ ಭಯೋತ್ಪಾದಕ ಗುಂಪುಗಳ ವಿರುದ್ಧವೂ ಪಾಕಿಸ್ತಾನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಮೆರಿಕ ವಿದೇಶಾಂಗ ಇಲಾಖೆಯಲ್ಲಿ ಭಯೋತ್ಪಾದನೆ ನಿಗ್ರಹ ಸಮನ್ವಯಕಾರನಾಗಿರುವ ನತನ್ ಅಲೆಕ್ಸಾಂಡರ್ ಸ್ಯಾಲಿಸ್ ಹೇಳಿದರು.

ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಭಯೋತ್ಪಾದನೆಗೆ ಯಾರಾದರೂ ಬೆಂಬಲ ನೀಡಿದರೆ ಅಮೆರಿಕ ಕಳವಳಗೊಳ್ಳುತ್ತದೆ ಎಂದ ಸಂಸತ್ತು ಕಾಂಗ್ರೆಸ್‌ನಲ್ಲಿ ನಡೆದ ವಿಚಾರಣೆಯ ವೇಳೆ ಹೇಳಿದರು.

‘‘9/11ರ ಬಳಿಕ ಯಾವ ರೀತಿಯಲ್ಲಿ ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆಯೋ ಅದೇ ರೀತಿಯಲ್ಲಿ ಈಗಲೂ ಅವರು ಕ್ರಮ ತೆಗೆದುಕೊಳ್ಳಬೇಕೆಂದು ನಾವು ನಿರೀಕ್ಷಿಸಿದ್ದೇವೆ ಎಂಬುದನ್ನು ಪಾಕಿಸ್ತಾನದ ಉನ್ನತ ನಾಯಕತ್ವಕ್ಕೆ ತಿಳಿಸಲಾಗಿದೆ ಎಂದು ನಾನು ನಿಮಗೆ ಹೇಳಬಲ್ಲೆ’’ ಎಂದು ಸ್ಯಾಲಿಸ್ ಬುಧವಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News