ಜನವರಿಯಲ್ಲಿ ಟ್ರಂಪ್-ಕಿಮ್ 2ನೇ ಶೃಂಗ ಸಮ್ಮೇಳನ

Update: 2018-11-15 17:23 GMT

ಸಿಂಗಾಪುರ, ನ. 15: ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್‌ರನ್ನು ಹೊಸ ವರ್ಷದಲ್ಲಿ ಭೇಟಿಯಾಗುವ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಂದಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಗುರುವಾರ ಹೇಳಿದ್ದಾರೆ.

ಆದರೆ, ಪರಮಾಣು ಕಾರ್ಯಕ್ರಮಗಳ ಬಗ್ಗೆ ಉತ್ತರ ಕೊರಿಯ ನೀಡಿರುವ ಭರವಸೆಗಳನ್ನು ಮುರಿಯಲು ಈ ಬಾರಿ ಟ್ರಂಪ್ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಈ ವರ್ಷದ ಜೂನ್‌ನಲ್ಲಿ ಸಿಂಗಾಪುರದಲ್ಲಿ ಎರಡು ದೇಶಗಳ ನಾಯಕರ ನಡುವೆ ಪ್ರಥಮ ಶೃಂಗ ಸಮ್ಮೇಳನ ನಡೆದ ಬಳಿಕದ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಎರಡನೇ ಸಮ್ಮೇಳನವನ್ನು ಏರ್ಪಡಿಸುವ ಬಗ್ಗೆ ಉಭಯ ದೇಶಗಳ ನಾಯಕರು ಮಾತುಕತೆಯಲ್ಲಿ ನಿರತರಾಗಿದ್ದಾರೆ.

‘‘ಎರಡನೇ ಸಮ್ಮೇಳನದ ಕುರಿತ ಮಾತುಕತೆ ನಡೆಯುತ್ತಿದೆ. ಜನವರಿ 1ರ ಬಳಿಕ ಸಭೆ ನಡೆಯಬಹುದು ಎಂ ನಾವು ಭಾವಿಸಿದ್ದೇವೆ. ಆದರೆ, ಯಾವಾಗ ಮತ್ತು ಎಲ್ಲಿ ಎಂಬ ಬಗ್ಗೆ ಈಗಲೂ ಮಾತುಕತೆ ನಡೆಯುತ್ತಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News