ಮೊದಲ ಟಿಕೆಟ್ ಖರೀದಿಸಿದ ಒಡಿಶಾ ಸಿಎಂ ಪಟ್ನಾಯಕ್

Update: 2018-11-20 18:12 GMT

ಭುವನೇಶ್ವರ, ನ.20: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನ.27 ರಂದು ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್‌ನ ಉದ್ಘಾಟನಾ ಸಮಾರಂಭದ ಮೊದಲ ಟಿಕೆಟನ್ನು 500 ರೂ. ನೀಡಿ ಖರೀದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಕಿ ಇಂಡಿಯಾದ ಸಿಇಒ ಎಲೆನಾ ನೊರ್ಮನ್ ಅವರು ಪಟ್ನಾಯಕ್‌ಗೆ ವಿಶ್ವಕಪ್ ಉದ್ಘಾಟನಾ ಸಮಾರಂಭದ ಟಿಕೆಟನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಎರಡನೇ ಸಮಾರಂಭ ನ.28 ರಂದು ಕಟಕ್‌ನ ಬಾರಬತಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಭುವನೇಶ್ವರದಲ್ಲಿ ನಡೆಯುವ ಪುರುಷರ ಹಾಕಿ ವಿಶ್ವಕಪ್ ಸಮಾರಂಭದ ಆನ್‌ಲೈನ್ ಟಿಕೆಟ್ ಮಾರಾಟ ರವಿವಾರ ಆರಂಭವಾಗಿದೆ. ಭುವನೇಶ್ವರದಲ್ಲಿ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಸುಮಾರು 10,500 ಟಿಕೆಟ್‌ಗಳು, ನ.28ರ ಕಾರ್ಯಕ್ರಮಕ್ಕೆ 30,000 ಟಿಕೆಟ್‌ಗಳು ಮಾರಾಟವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News