ಪಾಕಿಸ್ತಾನದ ಪರಿಹಾರದ ಬೇಡಿಕೆ ತಿರಸ್ಕರಿಸಿದ ಐಸಿಸಿ

Update: 2018-11-20 18:14 GMT

ಮುಂಬೈ, ನ.20: ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯದ ಕಾರಣ ಬಿಸಿಸಿಐಯಿಂದ ಪರಿಹಾರದ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನದ ಕ್ರಿಕೆಟ್ ಮಂಡಳಿಯ ಬೇಡಿಕೆಯನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನ ವಿವಾದ ಇತ್ಯರ್ಥ ಸಮಿತಿಯು ತಿರಸ್ಕರಿಸಿದೆ.

ಭಾರತ ದ್ವಿಪಕ್ಷೀಯ ಸರಣಿ ಆಡದ ಹಿನ್ನೆಲೆಯಲ್ಲಿ ತನಗೆ ಭಾರೀ ನಷ್ಟವಾಗಿದೆ ಎಂದು ಕಳೆದ ವರ್ಷ ಐಸಿಸಿಗೆ ನೀಡಿದ ಅಧಿಕೃತ ದೂರಿನಲ್ಲಿ ಪಿಸಿಬಿ ತಿಳಿಸಿತ್ತು. ತನ್ನೊಂದಿಗೆ 2015ರಿಂದ ಸರಣಿ ಆಡದ ಬಿಸಿಸಿಐಯಿಂದ 447 ಕೋಟಿ ರೂ. ಪರಿಹಾರ ನೀಡಬೇಕೆಂದು ಪಿಸಿಬಿ ಕೇಳಿಕೊಂಡಿತ್ತು. ಈ ಪ್ರಕರಣವನ್ನು ಈ ವರ್ಷದ ಅಕ್ಟೋಬರ್ 1ರಿಂದ 3ರ ತನಕ ಮೂರು ದಿನ ವಿಚಾರಣೆ ನಡೆಸಲಾಗಿತ್ತು. ‘‘ಮೂರು ದಿನಗಳ ವಿಚಾರಣೆಯ ಬಳಿಕ, ವೌಖಿಕ ಹಾಗೂ ಲಿಖಿತ ವಿವರಗಳನ್ನು ಪರಿಗಣಿಸಿರುವ ವಿವಾದ ಇತ್ಯರ್ಥ ಸಮಿತಿಯು ಬಿಸಿಸಿಐ ವಿರುದ್ಧ ಪಿಸಿಬಿ ಮಾಡಿರುವ ಆರೋಪವನ್ನು ತಿರಸ್ಕರಿಸಿದೆ’’ ಎಂದು ಐಸಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News